Home ಟಾಪ್ ಸುದ್ದಿಗಳು KSRTCಗೆ ಉತ್ತರ ಪ್ರದೇಶದ ಅಧಿಕಾರಿಗಳು ಭೇಟಿ: ಕರ್ನಾಟಕದ ಬಸ್ ವ್ಯವಸ್ಥೆಗೆ ಫಿದಾ

KSRTCಗೆ ಉತ್ತರ ಪ್ರದೇಶದ ಅಧಿಕಾರಿಗಳು ಭೇಟಿ: ಕರ್ನಾಟಕದ ಬಸ್ ವ್ಯವಸ್ಥೆಗೆ ಫಿದಾ

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕೆ.ಎಸ್.ಆರ್.ಟಿ.ಸಿ ಯಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಎರಡು ದಿನಗಳ ಭೇಟಿ ನೀಡಿದ್ದು, ಕರ್ನಾಟಕದ ಬಸ್ ವ್ಯವಸ್ಥೆಗೆ ಅಧಿಕಾರಿಗಳು ಫಿದಾ ಆಗಿದ್ದಾರೆ.

ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಯಂತ್ರಣ ಕೊಠಡಿಯ ಕಾರ್ಯ ನಿರ್ವಹಣೆ ಹಾಗೂ ಬಸ್ಸುಗಳ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಇ.ವಿ. ಪವರ್ ಚಾರ್ಜಿಂಗ್ ಕೇಂದ್ರವನ್ನು ಪರಿಶೀಲಿಸಿ, ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಹಾಗೂ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿಯನ್ನು ಪಡೆದರು. ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್ ಹಾಗೂ ಅಶ್ವಮೇಧ ವಾಹನಗಳ ಬ್ರ್ಯಾಂಡಿಗ್ ಕಾರ್ಯವನ್ನು ಬಹುವಾಗಿ ಮೆಚ್ಚಿದರು.

ನಿಗಮದ ಎಲ್ಲಾ ಮಾದರಿಯ ವಾಹನಗಳನ್ನು ಹಾಗೂ ಕಾರ್ಗೋ ವಾಹನಗಳನ್ನು ಪರಿಶೀಲಿಸಿ ಸೂಕ್ತ ಮಾಹಿತಿಯನ್ನು ಪಡೆದರು. ನಿಗಮವು ಆಳವಡಿಸಿರುವ ಲೋಗೋ, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ಗಳ ಬಗ್ಗೆ ಅತ್ಯಂತ ಹರ್ಷ ವ್ಯಕ್ತಿಪಡಿಸಿ ನಿಗಮವು ಜಾರಿಗೊಳಿಸಿರುವ ಬ್ಯಾಂಡಿಂಗ್ ಪಕ್ರಿಯೆಗೆ ಅಭಿನಂದಿಸಿದರು.

Join Whatsapp
Exit mobile version