ಗೆದ್ದ 3 ದಿನಗಳಲ್ಲಿ ಪ್ರಧಾನಿ ಹೆಸರು ಘೋಷಣೆ: ಜೈರಾಮ್ ರಮೇಶ್

Prasthutha|

ದೆಹಲಿ: ಇಂಡಿಯಾ ಒಕ್ಕೂಟ ಐದು ವರ್ಷಗಳವರೆಗೆ ಒಬ್ಬ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡುತ್ತದೆ. ಫಲಿತಾಂಶ ಪ್ರಕಟವಾದ ಮೂರು ದಿನಗಳಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ಸಂವಹನದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

- Advertisement -


ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಹೊಂದಲಿದೆ ಎಂಬ ಪ್ರಧಾನಿ (ಪಿಎಂ) ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.


ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ್, ಮೊದಲ ಎರಡು ಹಂತದ ಚುನಾವಣೆಯ ಟ್ರೆಂಡ್ಗಳು ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆಗೆ ಮಾಡಲಿದೆ ಎಂದು ಹೇಳಲಾಗಿತ್ತು. ಈ ಟ್ರೆಂಡ್ ಶುರುವಾದ ನಂತರ ಅಂದರೆ ಎಪ್ರಿಲ್ 19ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಬದಲಾಗಿದೆ, ಅವರು ತಮ್ಮ ಚುನಾವಣಾ ತಂತ್ರಕ್ಕೆ ಕೋಮು ಸ್ಪರ್ಶವನ್ನು ನೀಡಲು ಪ್ರಾರಂಭಿಸಿದ್ದಾರೆ. ಎಲ್ಲದಲ್ಲೂ ಹಿಂದೂ-ಮುಸ್ಲಿಂ ವಿಚಾರವನ್ನು ತಂದು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಇತಿಹಾಸ ಮರುಕಳಿಸುತ್ತಿದೆ. ಅಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಂತೆ, ಈ ಬಾರಿಯೂ ಅಧಿಕಾರಕ್ಕೆ ಬರಲಿದೆ ಎಂದರು.

Join Whatsapp
Exit mobile version