Home ಟಾಪ್ ಸುದ್ದಿಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧ ಪಾಲಿಸದಿದ್ದರೆ ಭಾರತಕ್ಕೆ ಅಪಾಯ: ಅಮೆರಿಕ ಎಚ್ಚರಿಕೆ

ರಷ್ಯಾದ ಮೇಲೆ ಹೇರಿರುವ ನಿರ್ಬಂಧ ಪಾಲಿಸದಿದ್ದರೆ ಭಾರತಕ್ಕೆ ಅಪಾಯ: ಅಮೆರಿಕ ಎಚ್ಚರಿಕೆ

ಹೊಸದಿಲ್ಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ಎರಡು ದಿನಗಳ ನವದೆಹಲಿ ಭೇಟಿಗೆ ಮುಂಚಿತವಾಗಿ, ಯುಎಸ್ ರಾಷ್ಟ್ರೀಯ ಆರ್ಥಿಕ ಭದ್ರತಾ ಉಪ ಸಲಹೆಗಾರ ದಲೀಪ್ ಸಿಂಗ್ ಅವರು ರಷ್ಯಾ ವಿರುದ್ಧ ಯುಎಸ್ ಹೇರಿರುವ ನಿರ್ಬಂಧಗಳನ್ನು ತಪ್ಪಿಸಲು ನೋಡುತ್ತಿರುವ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದು ಉಕ್ರೇನ್ ಮೇಲಿನ ರಷ್ಯಾದ ದಾಳಿಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು ಎಂದು ಭಾರತಕ್ಕೆ ಅಮೆರಿಕ ಕಳುಹಿಸಿದ ಸಂದೇಶವಾಗಿದೆ ಎಂದು ರಾಜಕೀಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದಲೀಪ್ ಸಿಂಗ್, “ನಮ್ಮ ನಿರ್ಬಂಧಗಳ ಕಾರ್ಯವಿಧಾನ ಮತ್ತು ಹಂಚಿಕೆಯ ಬಗ್ಗೆ ಮಾತಾಡಲು ಸ್ನೇಹದೊಂದಿಗೆ ಇಲ್ಲಿಗೆ ಬಂದಿದ್ದೇನೆ. ರಷ್ಯಾಗೆ ಹೇರಿರುವ ನಿರ್ಬಂಧಗಳನ್ನು ತಪ್ಪಿಸಲು ಪ್ರಯತ್ನಿಸುವ ದೇಶಗಳು ಪರಿಣಾಮಗಳನ್ನು ಎದುರಿಸಲಿವೆ”. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ಆಕ್ಷೇಪಿಸಿದರು ಎಂದು ಅರ್ಜಿದಾದರ ವಕೀಲರು ವಾದಿಸಿದ್ದರು ಎಂದು ಅವರು ಹೇಳಿದ್ದಾರೆ.

ಆದರೆ ಭಾರತಕ್ಕೆ ಯುಎಸ್ ಯಾವುದೇ ‘ಕೆಂಪು ಗೆರೆ’ಗಳನ್ನು ಎಳೆಯುವುದಿಲ್ಲ. ನಮ್ಮ ಚರ್ಚೆಗಳು ಯುರೋಪ್ ಮತ್ತು ಏಷ್ಯಾದಲ್ಲಿ ನಮ್ಮ ಇತರ ಪಾಲುದಾರರೊಂದಿಗಿನ ಚರ್ಚೆಯಂತೆಯೇ ಇರುತ್ತದೆ. ಕಾಲಾನಂತರದಲ್ಲಿ ನಾವು ವಿಶ್ವಾಸಾರ್ಹವಲ್ಲದ ಇಂಧನ ಪೂರೈಕೆದಾರರ ಮೇಲೆ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮತ್ತು ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದರೂ, ಇಂಧನ ಶಕ್ತಿಯ ಪೂರೈಕೆಯನ್ನು ತ್ವರಿತವಾಗಿ ಹೆಚ್ಚಿಸಲು ಪರಿಸ್ಥಿತಿಯ ಲಾಭವನ್ನು ಪಡೆಯುವ ನಾವು ಯಾವುದೇ ಪ್ರಯತ್ನವನ್ನು ನೋಡಲು ನಾವು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

Join Whatsapp
Exit mobile version