Home ಟಾಪ್ ಸುದ್ದಿಗಳು ಮತ್ತೆ ಏರಿಕೆಯಾದ ತೈಲ ಬೆಲೆ; 12 ದಿನದಲ್ಲಿ 7.20 ರೂ. ಹೆಚ್ಚಳ

ಮತ್ತೆ ಏರಿಕೆಯಾದ ತೈಲ ಬೆಲೆ; 12 ದಿನದಲ್ಲಿ 7.20 ರೂ. ಹೆಚ್ಚಳ

ಹೊಸದಿಲ್ಲಿ: ದೇಶದಲ್ಲಿ ಇಂದು ಮತ್ತೆ ತೈಲ ಬೆಲೆ ಪ್ರತಿ ಲೀಟರ್ ಗೆ 80 ಪೈಸೆ ಏರಿಕೆಯಾಗಿದ್ದು, ಕಳೆದ 12 ದಿನದಲ್ಲಿ 7.20 ರೂ. ಹೆಚ್ಚಳವಾಗಿದೆ. ಶುಕ್ರವಾರ ತೈಲೆ ಬೆಲೆ ಹೆಚ್ಚಳವಾಗಿರಲಿಲ್ಲ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ 101.81 ರೂ ಇದ್ದ ಪೆಟ್ರೋಲ್ ದರವು ಇಂದು 102.61 ರೂ. ಆದರೆ, ಡೀಸೆಲ್ ದರಗಳು ಲೀಟರ್‌ಗೆ 93.07 ರೂ. ರಿಂದ 93.87 ರೂ.ಗೆ ಏರಿಕೆಯಾಗಿದೆ.

ಮಾರ್ಚ್ 22 ರ ಬಳಿಕ 12 ದಿನದಲ್ಲಿ 10 ಬಾರಿಗೆ ದರ ಹೆಚ್ಚಳವಾಗಿದ್ದು, ಪೆಟ್ರೋಲ್ ಬೆಲೆ ಲೀಟರ್‌ ಗೆ 7.20 ರೂಪಾಯಿಯಷ್ಟು ಏರಿಕೆಯಾಗಿದೆ. ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರ ವ್ಯತ್ಯಾಸವಾಗುತ್ತದೆ.

ಬೆಂಗಳೂರಿನಲ್ಲೂ ಇಂದು ತೈಲಬೆಲೆಯಲ್ಲಿ ಏರಿಕೆಯಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ 84 ಪೈಸೆ  ಮತ್ತು ಪ್ರತಿ ಲೀಟರ್ ಡೀಸೆಲ್ ಗೆ 78 ಪೈಸೆ ಏರಿಕೆಯಾಗಿದೆ.

ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 108.14 ರೂ ಇದ್ದರೆ, ಪ್ರತಿ ಲೀಟರ್ ಡೀಸೆಲ್ ಗೆ 92.05 ರೂ ಇದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ 106.48 ಮತ್ತುಡೀಸೆಲ್ ಗೆ 90.49 ರೂಪಾಯಿಗಳಾಗಿವೆ.

Join Whatsapp
Exit mobile version