Home ಟಾಪ್ ಸುದ್ದಿಗಳು ಇಸ್ರೇಲ್’ಗೆ ಮಿಲಿಟರಿ ಸಹಾಯ: ಬೈಡನ್‌ ನಿರ್ಧಾರ ವಿರೋಧಿಸಿ ಅಮೆರಿಕಾದ ಹಿರಿಯ ಅಧಿಕಾರಿ ರಾಜೀನಾಮೆ

ಇಸ್ರೇಲ್’ಗೆ ಮಿಲಿಟರಿ ಸಹಾಯ: ಬೈಡನ್‌ ನಿರ್ಧಾರ ವಿರೋಧಿಸಿ ಅಮೆರಿಕಾದ ಹಿರಿಯ ಅಧಿಕಾರಿ ರಾಜೀನಾಮೆ

ವಾಷಿಂಗ್ಟನ್: ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಗಳ ನಡುವೆ ಇಸ್ರೇಲ್ ಗೆ ಇನ್ನಷ್ಟು ಮಿಲಿಟರಿ ಸಹಾಯ ಒದಗಿಸುವ ಬೈಡನ್ ಆಡಳಿತದ ನಿರ್ಧಾರವನ್ನಿ ವಿರೋಧಿಸಿ ಬ್ಯೂರೋದ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ.


ಅವರು ಕಳೆದ 11 ವರ್ಷಗಳಿಂದ ಈ ಹುದ್ದೆಯಲ್ಲಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ, ಬೈಡನ್ ಆಡಳಿತದ “ಒಂದು ಕಡೆ ಕುರುಡು ಬೆಂಬಲ” ನೀತಿ ನಿರ್ಧಾರಗಳಿಗೆ ಕಾರಣವಾಗುತ್ತಿದೆ, ಅದು “ದೂರದೃಷ್ಟಿಯಿಲ್ಲದ, ವಿನಾಶಕಾರಿ, ಅನ್ಯಾಯ ಮತ್ತು ನಾವು ಸಾರ್ವಜನಿಕವಾಗಿ ಪ್ರತಿಪಾದಿಸುವ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದರು.


ಅಮೆರಿಕಾ ಬೆಂಬಲಿತ ಪ್ರತಿಕ್ರಿಯೆಯು ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರಿಗೆ ಇನ್ನಷ್ಟು ಕಷ್ಟಗಳನ್ನು ತಂದೊಡ್ಡಲಿದೆ ಎಂದು ಪೌಲ್ ಹೇಳಿದ್ದಾರೆ.

Join Whatsapp
Exit mobile version