Home ವಿದೇಶ ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆ: ನೇತನ್ಯಾಹುಗೆ ಕರೆ ಮಾಡಿದ ಬೈಡನ್

ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆ: ನೇತನ್ಯಾಹುಗೆ ಕರೆ ಮಾಡಿದ ಬೈಡನ್

ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.


ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್ ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ ನಾಗರಿಕರನ್ನು ರಕ್ಷಿಸುವ ಇಸ್ರೇಲ್ ನ ಹಕ್ಕನ್ನು ಬೈಡನ್ ಪ್ರತಿಪಾದಿಸಿದರು.


ಅಲ್ಲದೆ, ದಟ್ಟ ಜನಸಂಖ್ಯೆ ಇರುವ ಬೈರೂತ್ ನಂತಹ ಪ್ರದೇಶಗಳಲ್ಲಿ ನಾಗರಿಕರಿಗೆ ಹಾನಿ ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ.


ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಇಸ್ರೇಲಿ ಪ್ರಧಾನಿಯೊಂದಿಗಿನ ಕರೆಯಲ್ಲಿ ಮಾತನಾಡಿದ್ದಾರೆ.

Join Whatsapp
Exit mobile version