ಜಿನೇವಾ: ಬಂಧನದಿಂದ ಬಿಡುಗಡೆಗೊಂಡ ಮಹಿಳಾ ಹಕ್ಕುಗಳ ಹೋರಾಟಗಾರರ ಮೇಲೆ ವಿಧಿಸಲಾದ ಪ್ರಯಾಣ ನಿಷೇಧ ಮತ್ತು ಇತರ ನಿರ್ಬಂಧಗಳನ್ನು ತೆಗೆದುಹಾಕುವಂತೆ ಅಮೆರಿಕವು, ಸೌದಿ ಅರೇಬಿಯಾಕ್ಕೆ ಕರೆ ನೀಡಿದೆ.
ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ ಗೆ ಯು ಎಸ್ ರಾಯಭಾರಿಯಾಗಿರುವ ಮಿಚೆಲ್ ಟೇಲರ್, “ಆತ್ಮಸಾಕ್ಷಿಯ ಕೈದಿಗಳ” ಪ್ರಕರಣಗಳನ್ನು ಪರಿಹರಿಸಲು ಸೌದಿಗೆ ಕರೆ ನೀಡಿದರು. ಈ ಪದವನ್ನು ರಾಜಕೀಯ ಕೈದಿಗಳನ್ನು ಉಲ್ಲೇಖಿಸಲು ಹೆಚ್ಚಾಗಿ ಬಳಸಲಾಗುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ವಿಸ್ ನಗರದ ಜಿನೇವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟೇಲರ್, ಕೈದಿಗಳ ಪ್ರಕರಣಗಳನ್ನು ಸಂಪೂರ್ಣವಾಗಿ ಪರಿಹರಿಸಲು ಮತ್ತು ಹಿಂದೆ ಬಿಡುಗಡೆಯಾದ ಮಹಿಳಾ ಹಕ್ಕುಗಳ ಕಾರ್ಯಕರ್ತರ ಮೇಲಿನ ಪ್ರಯಾಣ ನಿಷೇಧಗಳು ಮತ್ತು ಇತರ ನಿರ್ಬಂಧಗಳನ್ನು ತೆಗೆದುಹಾಕಲು ಸೌದಿ ಅರೇಬಿಯಾವನ್ನು ನಾವು ಒತ್ತಾಯಿಸುತ್ತೇವೆ,” ಎಂದು ಹೇಳಿದರು.
ಅವರು ಯಾವುದೇ ರಾಜಕೀಯ ಕೈದಿಗಳನ್ನು ಅಥವಾ ಮಹಿಳಾ ಹಕ್ಕುಗಳ ಕಾರ್ಯಕರ್ತರನ್ನು ಹೆಸರಿಸಲಿಲ್ಲ.