ಪುತ್ತೂರು: SDTU ಇದರ ಸಹ ಸಂಘಟನೆಯಾದ ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ವಾರ್ಷಿಕ ಕಾರ್ಯಕ್ರಮ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ಕುಞ ಬಾಬ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನೀಶ್ ಹಾಲ್ ನಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಹಮೀದ್ ಕೆ. ಎಸ್ ವಾಚಿಸಿದರೆ, ಕಾರ್ಯದರ್ಶಿ ಹನೀಫ್ ಪೈಸಾರಿ ಸ್ವಾಗತಿಸಿದರು. ಬಳಿಕ ನೂತನ ಸಮಿತಿ ರಚನೆ ನಡೆಸಲಾಯಿತು
ಯೂನಿಯನ್ ಉಸ್ತುವಾರಿಯಾಗಿ ಶಮೀರ್ ನಾಜೂಕು, ಅಧ್ಯಕ್ಷರಾಗಿ ಆಶಿಫ್ ಮುಕ್ವೆ, ಉಪಾಧ್ಯಕ್ಷರಾಗಿ ಶಾಕಿರ್ ಬೆಳಂದೂರು, ಕಾರ್ಯದರ್ಶಿಯಾಗಿ ಸುಹೈಲ್ ಬಡಕೋಡಿ, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ಸಾಲ್ಮರ, ಕೋಶಾಧಿಕಾರಿಯಾಗಿ ಆಶಿಫ್ ಉಪ್ಪಿನಂಗಡಿ ಸದಸ್ಯರಾಗಿ ಶಾಕಿರ್ ಬಿಕೆ, ಕೆ.ಎಸ್ ಅಬ್ದುಲ್ ಹಮೀದ್, ಅಬ್ದುಲ್ ಖಾದರ್ ಪುತ್ತೂರು, ಆರ್ಷದ್ ಸಂಪ್ಯ, ಯಾಕೂಬ್ ಸಂಟ್ಯಾರ್, ಅಬ್ದುಲ್ ರಝಾಕ್ ರವರನ್ನು ಆಯ್ಕೆ ಮಾಡಾಲಾಯಿತು
ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, ಯೂನಿಯನ್ ವತಿಯಿಂದ ಪುತ್ತೂರಿನಲ್ಲಿ ನಡೆಸಿದ ಕ್ಷೇಮಾಭಿವೃದ್ಧಿ ಕಾರ್ಯಗಳು, ಹೋರಾಟಗಳು, ಸೇವೆಗಳು, ಜಾಗೃತಿ ಕಾರ್ಯಕ್ರಮಗಳು ಆಟೋ ಚಾಲಕರು ಕೇವಲ ದುಡಿಮೆಗೆ ಮಾತ್ರ ಸೀಮಿತವಾದವರಲ್ಲ. ಅವರಲ್ಲೂ ಸಾಮಾಜಿಕ ಕರ್ತವ್ಯಗಳು ಸೇವಾ ಮನೋಭಾವ ಇದೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದರು