ತಮಿಳ್ನಾಡು: ಸ್ಥಳೀಯ ಸಂಸ್ಥೆ ಚುನಾವಣೆ; ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಡಿಎಂಕೆ ಮುನ್ನಡೆ

Prasthutha|

ಚೆನ್ನೈ: ಇತ್ತೀಚೆಗೆ ತಮಿಳ್ನಾಡಿನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆಯಲ್ಲಿ ಆಡಳಿತರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಈ ಚುನಾವಣೆಯಲ್ಲಿ ಆಡಳಿತರೂಢ ಮೈತ್ರಿಕೂಟ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ. ಈ ಚುನಾವಣೆಯಲ್ಲಿ ವಿಪಕ್ಷ ಎಐಎಡಿಎಂಕೆ ದ್ವಿತೀಯ ಸ್ಥಾನವನ್ನು ಪಡೆಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಡಿಎಂಕೆ ಮೈತ್ರಿಕೂಟವು ಎಲ್ಲಾ ಮುನ್ಸಿಪಲ್ ಕಾರ್ಪೋರೇಶನ್ ಗಳಲ್ಲಿ ಇತರೆ ಪಕ್ಷಗಳಿಗಿಂತ ಮುನ್ನಡೆ ಕಾಯ್ದುಗೊಂಡಿದ್ದು, ಅಭ್ಯರ್ಥಿಗಳು ಅನೇಕ ಪುರಸಭೆ ಮತ್ತು ಪಟ್ಟಣ ಪಂಚಾಯತ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಫೆಬ್ರವರಿ 19 ರಂದು ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಅಂತಿಮ ಸುತ್ತಿನ ಮತ ಎಣಿಕೆ 10 ಗಂಟೆಯ ಹೊತ್ತಿಗೆ, ಚುನಾವಣಾ ಆಯೋಗವು ಫಲಿತಾಂಶ ಪ್ರಕಟಿಸಿದ (ಅವಿರೋಧ ಆಯ್ಕೆಗೊಂಡವರನ್ನು ಒಳಗೊಂಡಂತೆ) 10 ಮುನ್ಸಿಪಲ್ ಕಾರ್ಪೋರೇಶನ್ ವಾರ್ಡ್ ಸದಸ್ಯರ ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳನ್ನು ಡಿಎಂಕೆ ಪಡೆದಿದ್ದು, ಒಬ್ಬರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ. ಇನ್ನೂ ಪುರಸಭೆಗೆ ಸಂಬಂಧಿಸಿದಂತೆ ಡಿಎಂಕೆ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ 28 ಪುರಸಭೆ ವಾರ್ಡ್ ಗಳನ್ನು ಗೆದ್ದರೆ, ಎಐಎಡಿಎಂಕೆ ಸದಸ್ಯರು 13 ಸ್ಥಾನಗಳನ್ನು ಗೆದ್ದಿದ್ದಾರೆ. ಪಟ್ಟಣ ಪಂಚಾಯತ್ ವಾರ್ಡ್ ಸದಸ್ಯ ಸ್ಥಾನಗಳಿಗೆ ಸಂಬಂಧಿಸಿದಂತೆ, ಡಿಎಂಕೆ ಅಭ್ಯರ್ಥಿಗಳು 353 ರಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಅದೇ ರೀತಿ ಎಐಎಡಿಎಂಕೆ 91 ಸ್ಥಾನಗಳನ್ನು ಸಂಪಾದಿಸಿದ್ದಾರೆ. ನಗರಸಭೆಯ ಎಂದು ವಾರ್ಡ್ ಸದಸ್ಯ ಸ್ಥಾನ, ಐದು ಪುರಸಭೆ ವಾರ್ಡ್ ಸದಸ್ಯ ಸ್ಥಾನ ಹಾಗೂ 26 ಪಟ್ಟಣ ಪಂಚಾಯತ್ ವಾರ್ಡ್ ಸದಸ್ಯ ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

Join Whatsapp
Exit mobile version