Home ಟಾಪ್ ಸುದ್ದಿಗಳು UPSC ಫಲಿತಾಂಶ: ಟಾಪ್ 50ರ ಒಳಗೆ ರಾಜ್ಯದ ಇಬ್ಬರು ವೈದ್ಯರ ಸಾಧನೆ

UPSC ಫಲಿತಾಂಶ: ಟಾಪ್ 50ರ ಒಳಗೆ ರಾಜ್ಯದ ಇಬ್ಬರು ವೈದ್ಯರ ಸಾಧನೆ

0

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾಗಿರುವ 1009 ಅಭ್ಯರ್ಥಿಗಳ ಪೈಕಿ ಶಕ್ತಿ ದುಬೆ ದೇಶದಲ್ಲಿ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಇನ್ನೂ ಟಾಪ್‌ 50ರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.

ಟಾಪ್‌ 50ರ ಒಳಗೆ ಕರ್ನಾಟಕದ ಇಬ್ಬರು ವೈದ್ಯರು ಸೇರಿದ್ದಾರೆ. ಡಾ.ರಂಗ ಮಂಜು 24ನೇ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಟಾಪರ್ಸ್‌
– ಆರ್ ರಂಗರಾಜು – 24
– ಸಚಿನ್ ಹರಿಹರ – 41
– ಅನುಪ್ರಿಯಾ ಸಖ್ಯ – 120.
– ಬಿಎಂ ಮೇಘನಾ – 425.
– ಮಾಧವಿ ಆರ್ – 446
– ಭರತ್ ಸಿ ಯಾರಂ – 567
– ಡಾ.ಭಾನುಪ್ರಕಾಶ್ – 523
– ನಿಖಿಲ್ ಎಂಆರ್- 724
– ಟಿ ವಿಜಯ್ ಕುಮಾರ್ – 894.
– ಹನುಮಂತಪ್ಪ ನಂದಿ – 910.
– ವಿಶಾಕ ಕದಂ – 962
– ಸಂದೀಪ್ ಸಿಂಗ್ – 981
– ಮೋಹನ್ ಪಾಟೀಲ್ – 984

ದೇಶದ ಮೊದಲ 10 ಟಾಪರ್ಸ್‌: ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೊಮ್ಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ

NO COMMENTS

LEAVE A REPLY

Please enter your comment!
Please enter your name here

Exit mobile version