Home ಟಾಪ್ ಸುದ್ದಿಗಳು ದೇವಸ್ಥಾನಗಳ ಬಳಿಯಿರುವ ಮಸೀದಿಗಳನ್ನು ತೆಗೆದು ಹಾಕಬೇಕು: ವಿವಾದಿತ ಹೇಳಿಕೆ ನೀಡಿದ ಸಚಿವ

ದೇವಸ್ಥಾನಗಳ ಬಳಿಯಿರುವ ಮಸೀದಿಗಳನ್ನು ತೆಗೆದು ಹಾಕಬೇಕು: ವಿವಾದಿತ ಹೇಳಿಕೆ ನೀಡಿದ ಸಚಿವ

ಲಕ್ನೋ: ದೇವಾಲಯಗಳ ಸಮೀಪದಲ್ಲಿರುವ ಎಲ್ಲಾ ಮಸೀದಿಗಳನ್ನು ತೆಗೆದು ಹಾಕುಬೇಕು ಎಂದು ಉತ್ತರ ಪ್ರದೇಶ ಸರ್ಕಾರದ ಮೀನುಗಾರಿಕಾ ಸಚಿವ ಸಂಜಯ್ ನಿಶಾದ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಉನ್ಮಾದ ಹರಡುತ್ತಿದ್ದು, ದೇವಸ್ಥಾನಗಳ ಬಳಿಯಿರುವ ಮಸೀದಿಗಳನ್ನು ತೆಗೆದು ಹಾಕುಬೇಕು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಿದ ಅವರು, ಮದರಸಾಗಳು ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅಲ್ಲಿಂದ ಹಲವಾರು ಬಾರಿ ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಮದರಸಾಗಳ ಸಮೀಕ್ಷೆಗೆ ಮುಸ್ಲಿಮ್ ಧಾರ್ಮಿಕ ಮುಖಂಡರು ಬೆಂಬಲ ನೀಡುವಂತೆ ಸೂಚಿಸಿದರು.

ಪ್ರತಿಪಕ್ಷಗಳು ಮೌಲಾನಗಳೊಂದಿಗೆ ಸೇರಿಕೊಂಡು ಧಾರ್ಮಿಕ ಉನ್ಮಾದವನ್ನು ಹರಡುತ್ತಿದೆ ಮತ್ತು ಗಲಾಭೆಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.

Join Whatsapp
Exit mobile version