Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ 36 ರಲ್ಲಿ ಆರ್.ಎಲ್.ಡಿ, 6 ಸಮಾಜವಾದಿ ಪಕ್ಷ ಸ್ಪರ್ಧೆ ಖಚಿತ: ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ 36 ರಲ್ಲಿ ಆರ್.ಎಲ್.ಡಿ, 6 ಸಮಾಜವಾದಿ ಪಕ್ಷ ಸ್ಪರ್ಧೆ ಖಚಿತ: ಅಖಿಲೇಶ್ ಯಾದವ್

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ (ಆರ್.ಎಲ್.ಡಿ) ಬಹುತೇಕ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, 36 ರಲ್ಲಿ ಆರ್.ಎಲ್.ಡಿ ಮತ್ತು 6 ರಲ್ಲಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ ಮಂಗಳವಾರ ಸಂಜೆ ಲಕ್ನೋದಲ್ಲಿ ಆರ್.ಎಲ್.ಡಿ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಸಿದ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್.ಎಲ್.ಡಿ 36 ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಆರು ಸ್ಥಾನಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಆರ್.ಎಲ್.ಡಿ ಚಿಹ್ನೆಯ ಅಡಿಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

2018 ರ ಲೋಕಸಭಾ ಉಪ ಚುನಾವಣೆಯಲ್ಲಿ ಕೈರಾನಾದಲ್ಲಿ ಸಮಾಜವಾದಿ ಪಕ್ಷದ ತಬಸ್ಸುಮ್ ಹಸನ್ ಆರ್.ಎಲ್.ಡಿ ಟಿಕೆಟ್ ನಲ್ಲಿ ಸ್ಪರ್ಧೆ ನಡೆಸಿದಾಗ ಇದೇ ರೀತಿಯ ಮೈತ್ರಿ ಕಂಡುಬಂದಿತ್ತು.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಜಯಂತ್ ಚೌಧರಿ ಸಕ್ರಿಯವಾಗಿ ಭಾಗವಹಿಸಿದ ರೈತರ ಆಂದೋಲನದ ನಂತರ ಆರ್.ಎಲ್.ಡಿ ಉತ್ತಮ ಸ್ಥಾನದಲ್ಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಅವರು ಜಂಟಿ ಜಾಥಾ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Join Whatsapp
Exit mobile version