ಹೊಸದಿಲ್ಲಿ: ತ್ರಿಪುರಾದಲ್ಲಿ ಸಂಘಪರಿವಾರ ನಡೆಸಿದ ಮುಸ್ಲಿಂ ವಿರೋಧಿ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಬಂಧನಕ್ಕೊಳಗಾಗಿ ಯುಎಪಿಎ ಹಾಕಲ್ಪಟ್ಟ ನಾಲ್ವರು ಮುಸ್ಲಿಂ ವಿದ್ವಾಂಸರಿಗೆ ತ್ರಿಪುರಾದ ನ್ಯಾಯಾಲಯ ಜಾಮೀನು ನೀಡಿದೆ.
ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಯಾದ ತಹ್ರೀಖ್ ಫಾರೂಖ್ ಇಸ್ಲಾಂ ಅಧ್ಯಕ್ಷ ಖಮರ್ ಗನಿ ಉಸ್ಮಾನಿ ಮತ್ತು ವಿದ್ವಾಂಸರಾದ ಇಹ್ಸಾನುಲ್ ಹಕ್ ರಸ್ಕಿ, ಖಾರೀ ಆಸೀಫ್ ಮತ್ತು ಮುದಸ್ಸಿರ್ ಅವರಿಗೆ ತ್ರಿಪುರಾದ ನ್ಯಾಯಾಲಯ ಜಾಮೀನು ನೀಡಿದೆ. ಅವರು ಬಂಧನವಾಗಿ ಎರಡು ವಾರ ಕಳೆಯಿತು.
ಸಂತ್ರಸ್ತರಿಗೆ ಸಾಂತ್ವನ ಹೇಳಲು ಹೊರಟ ವಿದ್ವಾಂಸರ ಮೇಲೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಠಿಣ ದಂಡವಿಧಿಸುವ ಯುಎಪಿಎ ಸೆಕ್ಷನ್ 13 ರ ಅಡಿಯಲ್ಲಿ ಕೇಸು ಜಡಿದು ಬಂಧಿಸಲಾಗಿತ್ತು. ಇದಲ್ಲದೆ, ಅವರ ವಿರುದ್ಧದ ಎಫ್ ಐಆರ್ ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ, 153ಬಿ, 503 (ಕ್ರಿಮಿನಲ್ ಬೆದರಿಕೆ) ಮತ್ತು 504ಅನ್ನು ಸೇರಿಸಲಾಗಿತ್ತು. ಖಮರ್ ಗನಿ ಉಸ್ಮಾನಿ ಮತ್ತು ಇತರ ವಿದ್ವಾಮಸರು ಕಳೆದ ತಿಂಗಳು ರಾಜ್ಯದಾದ್ಯಂತ ಮುಸ್ಲಿಮರ ಮೇಲಿನ ದಾಳಿಯಿಂದ ಸಂಕಷ್ಟಕ್ಕೀಡಾದವರನ್ನು ಭೇಟಿ ಮಾಡಲು ತ್ರಿಪುರಾಕ್ಕೆ ಹೋಗಿದ್ದರು. ನವೆಂಬರ್ 4ರಂದು ಅವರನ್ನು ಪೊಲೀಸರು ಬಂಧಿಸಿದ್ದರು. ಹಾಗೆ ಬಂಧಿಸಲ್ಪಟ್ಟು ಪೊಲೀಸ್ ಠಾಣೆಗೆ ಹೋಗುವಾಗ ತಮ್ಮ ಬಂಧನದ ಬಗ್ಗೆ ಸೆಲ್ಪಿ ವೀಡಿಯೋ ಮಾಡಿ ಅವರು ಜನರಿಗೆ ತಿಳಿಸಿದ್ದರು.
ಬಳಿಕ ಗಂಭೀರ ಹೊರಿಸಲ್ಪಟ್ಟ ಕಾರಣ ಅವರನ್ನು ಜೈಲಿಗೆ ಹಾಕಲಾಗಿತ್ತು. ಇಂದು ಆ ನಾಲ್ವರು ವಿದ್ವಾಮಸರಿಗೆ ಜಾಮೀನು ನೀಡಲಾಗಿದೆ. ಎಲ್ಲರೂ ಶೀಘ್ರದಲ್ಲೇ ಜೈಲಿನಿಂದ ಹೊರಬರುವ ನಿರೀಕ್ಷೆಯಿದೆ ಎಂದು ವಿದ್ವಾಂಸರನ್ನು ಪ್ರತಿನಿಧಿಸುವ ಮಹಮೂದ್ ಪ್ರಾಚಾ ಪ್ರತಿಕ್ರಿಯಿಸಿದ್ದಾರೆ. ಸಂಘಪರಿವಾರದ ದಾಳಿಯ ಸಂತ್ರಸ್ತರನ್ನು ಭೇಟಿಯಾಗಿ ಸತ್ಯವನ್ನು ಹೊರಗೆ ತಿಳಿಸುತ್ತಾರೆಂದೂ, ಅಂತಹವರನ್ನು ಹೆದರಿಸಲು ಯುಎಪಿಎಯಂತಹ ಗಂಭೀರ ಕಾಯ್ದೆಯನ್ನು ದುರುಪಯೋಗಪಡಿಸಿದ್ದಾರೆ ಎಂದು ಮಹಮೂದ್ ಪ್ರಾಚಾ ಹೇಳಿದ್ದಾರೆ.
ತ್ರಿಪುರಾದಲ್ಲಿ ವ್ಯಾಪಕ ಹಿಂಸಾಚಾರ ನಡೆಸಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ಹಿಂಸಾಚಾರ ನಡೆಸಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗಬೇಕಾಗಿದೆ. ಆದರೆ ಅವರನ್ನು ಭೇಟಿಯಾಗಲು ಹೊರಟ ನಾಲ್ಚರು ವಿದ್ವಾಂಸರನ್ನು ವಶಕ್ಕೆ ಪಡೆದು ಗಂಭೀರ ಸೆಕ್ಷನ್ ಅಡಿಯಲ್ಲಿ ಪ್ರಕಾರಣ ದಾಕಲಿಸಿ ಎರಡು ವಾರ ಜೈಲುವಾಸವನ್ನು ಪೊಲೀಸರು ನೀಡಿದ್ದಾರೆ. ಇಂದು ಜಾಮೀನು ದೊರೆತ ವಿದ್ವಾಂಸರು ಎರಡು ದಿನಗಳಲ್ಲಿ ಬಿಡುಗಡೆಯಾದರೂ ಆ ಕೇಸು ಮುಂದುವರಿಯಲಿದೆ.