Home ಟಾಪ್ ಸುದ್ದಿಗಳು ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಯೋಗಿ ಸರ್ಕಾರ ನಿರ್ಧಾರ

ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಯೋಗಿ ಸರ್ಕಾರ ನಿರ್ಧಾರ

ಲಖ್ನೋ: ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ‘ವೀರಾಂಗನಾ ಲಕ್ಷ್ಮೀಬಾಯಿ ರೈಲುನಿಲ್ದಾಣ’ ಎಂದು ಬದಲಿಸಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ.

ರೈಲು ನಿಲ್ದಾಣದ ಹೆಸರು ಬದಲಾವಣೆಗೆ ನಿರ್ಧರಿಸಿದ ಸರ್ಕಾರ ರೈಲ್ವೆ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ರೈಲ್ವೆ ಸಚಿವಾಲಯವು ಪ್ರಸ್ತಾವನೆಯನ್ನು ಅಂಚೆ ಇಲಾಖೆ ಮತ್ತು ಸರ್ವೆ ಆಫ್‌ ಇಂಡಿಯಾಕ್ಕೆ ರವಾನಿಸಿದ್ದು, ಅಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಗೃಹ ಸಚಿವಾಲಯವು ಹೆಸರು ಬದಲಾವಣೆಗೆ ಅಧಿಕೃತ ಅಧಿಸೂಚನೆ ಹೊರಡಿಸಲಿದೆ.

ಇತ್ತಿಚೆಗೆ ವಾರಾಣಸಿಯ ಮಂಡೂದಿಹ್‌ ರೈಲು ನಿಲ್ದಾಣದ ಹೆಸರನ್ನು ಬನಾರಸ್‌ ಎಂದು ಯೋಗಿ ಸರ್ಕಾರ ಬದಲಿಸಿತ್ತು.

Join Whatsapp
Exit mobile version