Home ಟಾಪ್ ಸುದ್ದಿಗಳು ಉತ್ತರ ಪ್ರದೇಶ । ದಂಪತಿ ಸೇರಿ ಒಂದೇ ಕುಟುಂಬದ ಐವರ ಬರ್ಬರ ಕೊಲೆ

ಉತ್ತರ ಪ್ರದೇಶ । ದಂಪತಿ ಸೇರಿ ಒಂದೇ ಕುಟುಂಬದ ಐವರ ಬರ್ಬರ ಕೊಲೆ

ಲಕ್ನೋ: ದಂಪತಿ ಸೇರಿ ಒಂದೇ ಕುಟುಂಬದ ಐವರನ್ನು ಮಾರಕಾಯುಧದ ಮೂಲಕ ಕತ್ತು ಸೀಳಿ ಬರ್ಬರವಾಗಿ ಕೊಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಉತ್ತರ ಪ್ರದೇಶದ ಪ್ರಯಾಗ್’ರಾಜ್ ಎಂಬಲ್ಲಿ ನಡೆದಿದೆ.

ನವಾಬ್’ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಖಗಲ್’ಪುರ ಎಂಬ ದಂಪತಿ ಮತ್ತು ಮೂರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೃತರನ್ನು ರಾಹುಲ್ ತಿವಾರಿ, ಪತ್ನಿ ಪ್ರೀತಿ ತಿವಾರಿ, ಮೂವರು ಮಕ್ಕಳಾದ ಮಾಹಿ, ಪಿಹು ಪೊಹು ಎಂದು ಗುರುತಿಸಲಾಗಿದ್ದು, ಈ ಭೀಕರ ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version