Home ಟಾಪ್ ಸುದ್ದಿಗಳು ಬಡ ರಾಷ್ಟ್ರಗಳಲ್ಲಿ ಲಸಿಕೆ ಕೊರತೆ ನೀಗಿಸಲು ವಿಶ್ವಸಂಸ್ಥೆ ಕರೆ

ಬಡ ರಾಷ್ಟ್ರಗಳಲ್ಲಿ ಲಸಿಕೆ ಕೊರತೆ ನೀಗಿಸಲು ವಿಶ್ವಸಂಸ್ಥೆ ಕರೆ

ಶ್ರೀಮಂತ ರಾಷ್ಟ್ರಗಳು ಅಭಿಯಾನಗಳ ಮೂಲಕ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಬಡ ದೇಶಗಳಲ್ಲಿ ಲಸಿಕೆ ಪ್ರಮಾಣಗಳ ಕೊರತೆಯಿದ್ದು, ಬಡ ದೇಶಗಳಿಗೆ ಶ್ರೀಮಂತ ರಾಷ್ಟ್ರಗಳು ಲಸಿಕೆ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೆ ನೀಡಿದೆ.

ಡೆಲ್ಟಾ ರೂಪಾಂತರವು ಜಾಗತಿಕವಾಗಿ ಹರಡುತ್ತಿದ್ದಂತೆ ಆಫ್ರಿಕಾದ ಪರಿಸ್ಥಿತಿ ಹದಗೆಡುತ್ತಿದೆ, ಕಳೆದ ವಾರಕ್ಕೆ ಹೋಲಿಸಿದರೆ ಹೊಸ ಸೋಂಕುಗಳು ಮತ್ತು ಸಾವುಗಳು 40 ಶೇಕಡಾ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಥಾನಮ್ ಗೇಬ್ರಿಯೇಸುಸ್ ಹೇಳಿದ್ದಾರೆ. ಲಸಿಕೆ ಪ್ರಮಾಣವನ್ನು ಬಡ ದೇಶಗಳೊಂದಿಗೆ ಹಂಚಿಕೊಳ್ಳಲು ಹಿಂಜರಿಯುವ ದೇಶಗಳನ್ನು ಟೆಡ್ರೊಸ್ ಟೀಕಿಸಿದ್ದಾರೆ. ಕಾಲರಾದಿಂದ ಪೋಲಿಯೊವರೆಗಿನ ಸಾಂಕ್ರಾಮಿಕ ರೋಗಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವಲ್ಲಿ ಕೈಗಾರಿಕೀಕರಣಗೊಂಡ ರಾಷ್ಟ್ರಗಳಿಗಿಂತ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಉತ್ತಮವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ತಜ್ಞ ಮೈಕ್ ರಯಾನ್ ಹೇಳಿದರು.

Join Whatsapp
Exit mobile version