Home ಟಾಪ್ ಸುದ್ದಿಗಳು ಹಿಜಾಬಿ ಹುಡುಗಿಯ ಚಿತ್ರವಿದ್ದ ಪರೀಕ್ಷಾ ಪೆ ಚರ್ಚಾ ಟ್ವಿಟರ್ ಪೋಸ್ಟ್, ಹೊಸ ಚಿತ್ರದೊಂದಿಗೆ ಪ್ರತ್ಯಕ್ಷ !

ಹಿಜಾಬಿ ಹುಡುಗಿಯ ಚಿತ್ರವಿದ್ದ ಪರೀಕ್ಷಾ ಪೆ ಚರ್ಚಾ ಟ್ವಿಟರ್ ಪೋಸ್ಟ್, ಹೊಸ ಚಿತ್ರದೊಂದಿಗೆ ಪ್ರತ್ಯಕ್ಷ !

ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು ಈ ವರ್ಷದ ಪರೀಕ್ಷಾ ಪೆ ಚರ್ಚಾ ವಿಷಯದ ಬಗ್ಗೆ  ಟ್ವಿಟರ್ ಪೋಸ್ಟ್ ನಲ್ಲಿ ಹಾಕಲಾಗಿದ್ದ ಹಿಜಾಬಿ ಹುಡುಗಿಯ ಚಿತ್ರವನ್ನು ತೆಗೆದು ಹೊಸ ಪೋಸ್ಟನ್ನು ಹಾಕಿದೆ.

ಈ ಕುರಿತು ರವಿ ನಾಯರ್ ಎಂಬವರು ಮುಸ್ಲಿಮ್ ಹುಡುಗಿಯೊಬ್ಬಳು ಹಿಜಾಬ್ ಧರಿಸಿರುವ ಚಿತ್ರ ಇರುವುದರಿಂದ ಅದನ್ನು ತೆಗೆದುಹಾಕಲಾಗಿದೆಯೇ ಎಂದು ಟ್ವೀಟ್ ಮಾಡಿದ್ದಾರೆ.

ಶಿಕ್ಷಣ ಸಚಿವಾಲಯವು ಆರಂಭದಲ್ಲಿ ಹಿಜಾಬ್ ಧರಿಸಿರುವ ಹುಡುಗಿಯ ಚಿತ್ರದೊಂದಿಗೆ ಪರೀಕ್ಷಾ ಪೆ ಚರ್ಚಾ ವಿಷಯದ ಬಗ್ಗೆ ಟ್ವೀಟ್ ಮಾಡಿತ್ತು. ಆದರೆ, ಶೀಘ್ರದಲ್ಲೇ ಅದರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಅನ್ನು ಅಳಿಸಿ, ಅದನ್ನು ಹೊಸ ಚಿತ್ರದೊಂದಿಗೆ ಬದಲಾಯಿಸಿತ್ತು.

ಆದಾಗ್ಯೂ, ಟ್ವಿಟರ್ ಖಾತೆದಾರರಾದ  ರವಿ ನಾಯರ್, ಸಚಿವಾಲಯದ ಟ್ವೀಟ್ ಅಳಿಸುವ ಮೊದಲು ಅದರ ಚಿತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿರುವ ಅವರು, ಮುಸ್ಲಿಂ ಹುಡುಗಿಯೊಬ್ಬಳು ಹಿಜಾಬ್ ಧರಿಸಿರುವ ಚಿತ್ರ ಇರುವುದರಿಂದ ಅದನ್ನು ತೆಗೆದುಹಾಕಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ

Join Whatsapp
Exit mobile version