Home ಟಾಪ್ ಸುದ್ದಿಗಳು ಸಂವಿಧಾನ ಮೀರಿ ನಡೆಯಲು ರಾಜ್ಯದಲ್ಲಿರುವುದು ಬಿಜೆಪಿ ಸರಕಾರ; ಆರೆಸ್ಸೆಸ್, ಬಜರಂಗದಳ ಸರಕಾರವಲ್ಲ: ಎಚ್. ವಿಶ್ವನಾಥ್

ಸಂವಿಧಾನ ಮೀರಿ ನಡೆಯಲು ರಾಜ್ಯದಲ್ಲಿರುವುದು ಬಿಜೆಪಿ ಸರಕಾರ; ಆರೆಸ್ಸೆಸ್, ಬಜರಂಗದಳ ಸರಕಾರವಲ್ಲ: ಎಚ್. ವಿಶ್ವನಾಥ್

►ಯಡಿಯೂರಪ್ಪರ ಆಡಳಿತದಲ್ಲಿ ಈ ರೀತಿಯ ಘಟನೆಗಳು ಆಗಿರಲಿಲ್ಲ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಎಚ್.ವಿಶ್ವನಾಥ್ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಪರೋಕ್ಷವಾಗಿ ಕೋಮುಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದೆ, ಸಂವಿಧಾನ ಮೀರಿ ನಡೆಯಲು ರಾಜ್ಯದಲ್ಲಿ ಇರುವುದು ಬಿಜೆಪಿ ಸರಕಾರವೇ ಹೊರತು, ಆರೆಸ್ಸೆಸ್, ಬಜರಂಗದಳ, ವಿಎಚ್’ಪಿ ಸರಕಾರ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರಕಾರವು ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಬಾರದು. ಸರ್ಕಾರದ ಉತ್ತರ ಇದಾಗಿರಬಾರದು. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. RSS, VHP, ಬಜರಂಗದಳದ ಸರ್ಕಾರ ಅಲ್ಲ. ಯಡಿಯೂರಪ್ಪರ ಆಡಳಿತದಲ್ಲಿ ಈ ರೀತಿಯ ಘಟನೆಗಳು ಆಗಿರಲಿಲ್ಲ, ಉನ್ನತ ನಾಯಕರು ಈ ಬಗ್ಗೆ ಗಮನಹರಿಸಿಕೊಳ್ಳುವಂತೆ ವಿಶ್ವನಾಥ್ ಸಲಹೆ ನೀಡಿದ್ದಾರೆ. 

ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳಿಂದ ತುಂಬಾ ಬೇಸರವಾಗಿದೆ. ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತೇನೆ ಎಂದಮಾತ್ರಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಈ ಕೋಮು ಸೌಹಾರ್ದ ಕದಡುವ ಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version