Home ಟಾಪ್ ಸುದ್ದಿಗಳು ಕಳಪೆ ಹೆದ್ದಾರಿ: ಸಾರ್ವಜನಿಕರ ಕ್ಷಮೆ ಕೇಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಳಪೆ ಹೆದ್ದಾರಿ: ಸಾರ್ವಜನಿಕರ ಕ್ಷಮೆ ಕೇಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಭೋಪಾಲ್: ಮಧ್ಯಪ್ರದೇಶದಲ್ಲಿ ಹೆದ್ದಾರಿಯನ್ನು ಕಳಪೆಯಾಗಿ ನಿರ್ಮಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾರ್ವಜನಿಕರಲ್ಲಿ ಕ್ಷಮೆ ಕೇಳಿದ್ದಾರೆ.


ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಇದ್ದ ವೇದಿಕೆಯಲ್ಲಿ ಗಡ್ಕರಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದು, ಮಂಡ್ಲಾದಿಂದ ಜಬಲ್ಪುರ ಹೆದ್ದಾರಿಯಲ್ಲಿ, ಬರೇಲಾದಿಂದ ಮಂಡ್ಲಾವರೆಗಿನ 63 ಕಿ.ಮೀ ಉದ್ದದ ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಬಗ್ಗೆ ನನಗೆ ತೃಪ್ತಿ ಇಲ್ಲ. ದುಃಖ ಹಾಗೂ ನೋವಾಗಿದೆ. ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ. ಅಲ್ಲದೆ, ಯೋಜನೆಗೆ ಹೊಸ ಗುತ್ತಿಗೆಗೆ ಆದೇಶ ನೀಡಿದ್ದಾರೆ.

Join Whatsapp
Exit mobile version