Home ಟಾಪ್ ಸುದ್ದಿಗಳು ಮೀಡಿಯಾ ಒನ್ ವಿರುದ್ಧ ಕೇಂದ್ರ ಸರ್ಕಾರ ಆರೋಪ ಅಸ್ಪಷ್ಟ: ಸುಪ್ರೀಮ್ ಕೋರ್ಟ್

ಮೀಡಿಯಾ ಒನ್ ವಿರುದ್ಧ ಕೇಂದ್ರ ಸರ್ಕಾರ ಆರೋಪ ಅಸ್ಪಷ್ಟ: ಸುಪ್ರೀಮ್ ಕೋರ್ಟ್

ನವದೆಹಲಿ: ಮಲಯಾಲಂ ಸುದ್ದಿವಾಹಿನಿ ಮೀಡಿಯಾ ಒನ್ ವಿರುದ್ಧ ಕೇಂದ್ರ ಗೃಹ ಸಚಿವಾಲಯವು ಮಾಡಿರುವ ಆರೋಪಗಳು ಅಸ್ಪಷ್ಟವಾಗಿವೆ ಎಂದು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಹೇಳಿದೆ.

ಪ್ರಸಕ್ತ ಈ ಪ್ರಕರಣದ ತೀರ್ಪನ್ನು ಸುಪ್ರೀಮ್ ಕೋರ್ಟ್ ಕಾಯ್ದಿರಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್ ಗೆ ವಿಧಿಸಿದ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ವಿರುದ್ಧ ಮೀಡಿಯಾ ಒನ್ ಪ್ರಧಾನ ಸಂಪಾದಕ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.

ಕೇಂದ್ರ ಗೃಹ ಸಚಿವಾಲಯವು ಭದ್ರತಾ ಅನುಮತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುದ್ದಿ ವಾಹಿನಿಯ ಪ್ರಸಾರ ಪರವಾನಗಿಯನ್ನು ನವೀಕರಿಸದಂತೆ ತೀರ್ಮಾನಿಸಿತ್ತು. ಈ ವರ್ಷ ಮಾರ್ಚ್ 15 ರಂದು ಗೃಹ ಸಚಿವಾಲಯ ಸಲ್ಲಿಸಿದ ಫೈಲ್ ಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿತು ಮತ್ತು ಕೇಂದ್ರ ಸರ್ಕಾರವು ವಿಧಿಸಿದ ಟೆಲಿಕಾಸ್ಟ್ ನಿಷೇಧವನ್ನು ತಡೆಹಿಡಿದಿತ್ತು.

“ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ ವರದಿಗಳು ಎಷ್ಟು ಅಸ್ಪಷ್ಟವಾಗಿವೆ. ಅಲ್ಲದೆ ಹೈಕೋರ್ಟ್ ವಿವರವಾದ ಮಾಹಿತಿಯನ್ನು ಸಲ್ಲಿಸಿಲ್ಲ. ಎರಡು ಪ್ಯಾರಾಗಳಲ್ಲಿ ಹೈಕೋರ್ಟ್ ಯಾಕೆ ವರದಿ ಮಾಡಿದೆ ಎಂದು ಈಗ ನಿಮಗೆ ತಿಳಿದಿದೆಯೇ? ” ಎಂದು ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿದೆ.

ಮೀಡಿಯಾ ಒನ್ ಚಾನೆಲ್ ಯಾವ ರೀತಿ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದೆ ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ ಎಂದು ಸುಪ್ರೀಮ್ ಕೋರ್ಟ್ ವಿಚಾರಣೆಯ ವೇಳೆ ಉಲ್ಲೇಖಿಸಿದೆ.

Join Whatsapp
Exit mobile version