Home ಟಾಪ್ ಸುದ್ದಿಗಳು ಹೆರಿಗೆ ವೇಳೆ ನವಜಾತ ಶಿಶುವಿನ‌ ಕೈ ಮುರಿತ; ದಾದಿಯರ ವಿರುದ್ಧ ಪ್ರಕರಣ ದಾಖಲು

ಹೆರಿಗೆ ವೇಳೆ ನವಜಾತ ಶಿಶುವಿನ‌ ಕೈ ಮುರಿತ; ದಾದಿಯರ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ಹೆರಿಗೆ ಮಾಡಿಸುವ ವೇಳೆ ನವಜಾತ ಶಿಶುವಿನ‌ ಕೈ ಮುರಿದ ಘಟನೆ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಉದ್ದನಪಲ್ಲಿಯಲ್ಲಿ ನಡೆದಿದೆ.


ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಸೂರು ನಗರದ ಕೊತ್ತೂರಿನ ಕೂಲಿಕಾರ್ಮಿಕ ಶಿವಕುಮಾರ್ ಎಂಬವರ ಪತ್ನಿ ವಸಂತ ಅವರನ್ನು ಹತ್ತಿರದ ಉದ್ಧನಪಲ್ಲಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.


ಈ ವೇಳೆ ಆಸ್ಪತ್ರೆ ವೈದ್ಯೆ ಗೈರಾಗಿದ್ದ ಕಾರಣ ದಾದಿಯರೇ ಹೆರಿಗೆ ಮಾಡಿಸಿದ್ದರು. ಈ ವೇಳೆ ಮಗುವಿನ ಕೈ ಮುರಿದಿದ್ದು, ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಹೊಸೂರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ.


ಮಗುವಿನ ಕೈ ಮುರಿದಿರುವ ಸುದ್ದಿ ತಿಳಿದು ಆಸ್ಪತ್ರೆ ಆವರಣದಲ್ಲಿ ಪೋಷಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version