Home ಟಾಪ್ ಸುದ್ದಿಗಳು ಉಮರ್ ಖಾಲಿದ್ ವಿರುದ್ಧ UAPA: ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ನೊಟೀಸ್‌

ಉಮರ್ ಖಾಲಿದ್ ವಿರುದ್ಧ UAPA: ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ನೊಟೀಸ್‌

ನವದೆಹಲಿ: ತನ್ನ ವಿರುದ್ಧ UAPAಯ ವಿವಿಧ ನಿಬಂಧನೆಗಳಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿರುವ ಅರ್ಜಿಗೆ ಸುಪ್ರೀಂಕೋರ್ಟ್‌ ಸ್ಪಂದಿಸಿದ್ದು, ಕೇಂದ್ರ ಸರಕಾರಕ್ಕೆ ನೊಟೀಸ್‌ ನೀಡಿ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಈ ಕುರಿತ ಅರ್ಜಿಗಳನ್ನು ನ.22ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಉಮರ್ ಖಾಲೀದ್ ಜಾಮೀನು ಕೋರಿ  ಸಲ್ಲಿಸಿದ ಮನವಿಯನ್ನು ಕೂಡ ಅದೇ ದಿನಾಂಕದಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಉಮರ್ ಖಾಲೀದ್ ಮೇಲೆ UAPA (ಭಯೋತ್ಪಾದನಾ ವಿರೋಧಿ ಕಾನೂನು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Join Whatsapp
Exit mobile version