Home ರಾಜ್ಯ ನಟ ದರ್ಶನ್ ನಾಯಿಯಿಂದ ಮಹಿಳೆ ಮೇಲೆ ದಾಳಿ: FIR ದಾಖಲು

ನಟ ದರ್ಶನ್ ನಾಯಿಯಿಂದ ಮಹಿಳೆ ಮೇಲೆ ದಾಳಿ: FIR ದಾಖಲು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯ ಮೇಲೆ ನಾಯಿಗಳು ದಾಳಿ ನಡೆಸಿ ಕಚ್ಚಿದೆ. ನಾಯಿ ಆರ್ ಆರ್ ನಗರದಲ್ಲಿರುವ ನಟ ದರ್ಶನ್ ಸಾಕಿರುವುದೆಂ ತಿಳಿದು ಬಂದಿದೆ. ಗಾಯಗೊಂಡಿರುವ ಮಹಿಳೆ ದರ್ಶನ್ ಮನೆಯ ಹುಡುಗರು ಸೇರಿದಂತೆ ನಟ ದರ್ಶನ್ ವಿರುದ್ಧವೂ ದೂರು ನೀಡಿದ್ದಾರೆ. ಈ ದೂರು ಆಧರಿಸಿ ನಟ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆಯ ಬಳಿಯಲ್ಲಿ ಸಾಕಿದ್ದ ನಾಯಿಗಳಿದ್ದವು. ಕಾರಿನಲ್ಲಿ ತೆರಳುತ್ತಿದ್ದ ಮಹಿಳೆ ನಾಯಿಗಳನ್ನು ಪಕ್ಕಕ್ಕೆ ಸರಿಸಿ ಅಂದಿದ್ದಕ್ಕೆ ದರ್ಶನ್ ಹುಡುಗರು ಮಹಿಳೆಯೊಂದಿಗೆ ಕಿರಿಕ್ ತೆಗೆದಿದ್ದಾರೆ. ಗಲಾಟೆಯ ವೇಳೆಯಲ್ಲಿ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿವೆ.

ನಾಯಿಗಳು ಕಚ್ಚಿದ ಪರಿಣಾಮ ಮಹಿಳೆಯ ಹೊಟ್ಟೆ ಸೇರಿದಂತೆ ವಿವಿಧ ಭಾಗಕ್ಕೆ ಗಾಯಗಳಾಗಿವೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ದರ್ಶನ್ ಹುಡುಗರು ಮೊದಲ ಆರೋಪಿಯಾಗಿದ್ರೇ, 2ನೇ ಆರೋಪಿಯಾಗಿ ನಟ ದರ್ಶನ್ ಹೆಸರಿದೆ. ಈ ಮೂಲಕ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.

Join Whatsapp
Exit mobile version