Home ಟಾಪ್ ಸುದ್ದಿಗಳು ಮೇ 23ರಿಂದ ದೈನಂದಿನ ಆಧಾರದ ಮೇಲೆ ಉಮರ್ ಖಾಲಿದ್ ಜಾಮೀನು ಅರ್ಜಿವಿಚಾರಣೆ: ದೆಹಲಿ ಹೈಕೋರ್ಟ್

ಮೇ 23ರಿಂದ ದೈನಂದಿನ ಆಧಾರದ ಮೇಲೆ ಉಮರ್ ಖಾಲಿದ್ ಜಾಮೀನು ಅರ್ಜಿವಿಚಾರಣೆ: ದೆಹಲಿ ಹೈಕೋರ್ಟ್

ನವದೆಹಲಿ: ಬೇಸಿಗೆ ರಜೆ ಪ್ರಾರಂಭವಾಗುವ ಮೊದಲು ವಿಚಾರಣೆಯನ್ನು ಪೂರ್ಣಗೊಳಿಸುವ ಸಲುವಾಗಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಸೋಮವಾರದಿಂದ ಪ್ರತಿದಿನವೂ ವಿಚಾರಣೆ ಮಾಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ಧರಿಸಿದೆ.

ಮೇ 23, 2022 ರಿಂದ ಪ್ರತಿದಿನವೂ ಜಾಮೀನು ಅರ್ಜಿಯ ವಿಶೇಷ ಪೀಠವಾಗಿ ವಾದಗಳನ್ನು ಆಲಿಸುವುದಾಗಿ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ರಜನೀಶ್ ಭಟ್ನಾಗರ್ ಅವರ ವಿಭಾಗೀಯ ಪೀಠ ಹೇಳಿದೆ.

ಈಶಾನ್ಯ ದೆಹಲಿ ಗಲಭೆ ಪ್ರಕರಣದ ದೊಡ್ಡ ಪಿತೂರಿಯಲ್ಲಿ ಜಾಮೀನು ನಿರಾಕರಿಸಿದ ಮಾರ್ಚ್ 24 ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಉಮರ್ ಖಾಲಿದ್ ಪ್ರಶ್ನಿಸಿದ್ದರು.

Join Whatsapp
Exit mobile version