ನವದೆಹಲಿ: 2010ರ ಸಿಟಿ ಬ್ಯಾಂಕ್ ನಲ್ಲಿ ನಡೆದ 400 ಕೋಟಿ ರೂ. ಹಗರಣದ ಹಿಂದಿನ ಮಾಸ್ಟರ್ ಮೈಂಡ್ ಭೋಂಡ್ಸಿ ಜೈಲಿನಲ್ಲಿದ್ದ ಶಿವರಾಜ್ ಪುರಿ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುರಿ (46) ಕೆಲವು ಸಮಯದಿಂದ ಕ್ಷಯರೋಗದಿಂದ ಬಳಲುತ್ತಿದ್ದು, ಮೆಹ್ರೌಲಿಯ ಎಲ್ ಆರ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗ್ಗೆ 9:30ರ ಸುಮಾರಿಗೆ ಪುರಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುರಿ ಅವರು ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ನವೆಂಬರ್ 2020 ರಿಂದ ಜೈಲಿನಲ್ಲಿದ್ದರು.