Home ಟಾಪ್ ಸುದ್ದಿಗಳು ಮಾನಹಾನಿಕರ ಫೋಟೋ, ವೀಡಿಯೋ ಪ್ರಕಟಿಸದಂತೆ ತಡೆಯಾಜ್ಞೆ ತಂದ ಉಮಾನಾಥ ಕೋಟ್ಯಾನ್

ಮಾನಹಾನಿಕರ ಫೋಟೋ, ವೀಡಿಯೋ ಪ್ರಕಟಿಸದಂತೆ ತಡೆಯಾಜ್ಞೆ ತಂದ ಉಮಾನಾಥ ಕೋಟ್ಯಾನ್

ಬೆಂಗಳೂರು: ಟಿಕೆಟ್ ಘೋಷಣೆಗೆ ಕ್ಷಣ ಗಣನೆ ನಡೆಯುತ್ತಿರುವ ಹೊತ್ತಲ್ಲಿ ಮೂಲ್ಕಿ ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ತನ್ನ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿ, ಫೋಟೋ, ವಿಡಿಯೊ ಪ್ರಕಟ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.


ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 40 ಕ್ಕೂ ಹೆಚ್ಚು ಮಾಧ್ಯಮಗಳಲ್ಲಿ ಯಾವುದೇ ಆಕ್ಷೇಪಕಾರಿ ಸುದ್ದಿ ಪ್ರಕಟಿಸದಂತೆ ಉಮಾನಾಥ ಕೋಟ್ಯಾನ್ ಅವರು ಮಂಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.


ಚುನಾವಣಾ ಸಂದರ್ಭದಲ್ಲಿ ಈ ಧಿಡೀರ್ ಬೆಳವಣಿಗೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯಲ್ಲಿ ಚರ್ಚೆಗಳು ಆರಂಭವಾಗಿದೆ.
ಇತ್ತೀಚೆಗಷ್ಟೆ ಪುತ್ತೂರಿನ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಂದಿಗಿದ್ದ ಅಶ್ಲೀಲ ಫೋಟೋವೊಂದು ಪ್ರಕಟವಾಗಿತ್ತು. ಅವರು ಕೂಡ ಇದರ ವಿರುದ್ಧ ದೂರು ದಾಖಲಿಸಿದ್ದರು.

Join Whatsapp
Exit mobile version