Home ಟಾಪ್ ಸುದ್ದಿಗಳು ಸಾವಿರಾರು ಮಂದಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ Freedom app ಮುಖ್ಯಸ್ಥ ಸುಧೀರ್’ಗೆ ನೋಟಿಸ್

ಸಾವಿರಾರು ಮಂದಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ Freedom app ಮುಖ್ಯಸ್ಥ ಸುಧೀರ್’ಗೆ ನೋಟಿಸ್

ಬೆಂಗಳೂರು: ಫ್ರೀಡಂ ಆ್ಯಪ್ ಮೂಲಕ ಸಾವಿರಾರು ಮಂದಿಗೆ ವಂಚಿಸಿದ ಆರೋಪದಲ್ಲಿ ಅದರ ಮುಖ್ಯಸ್ಥ ಸಿ.ಎಸ್. ಸುಧೀರ್ ಎಂಬಾತನನ್ನು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.


ಸುಧೀರ್ ಮತ್ತವರ ತಂಡದ ವಿರುದ್ಧ ನಯನಾ ಎಂಬ ಮಹಿಳೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.


ಈ ಮಧ್ಯೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿರುವ ಸುಧೀರ್ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹೀಗಾಗಿ ಅವರು ಬಂಧನ ಭೀತಿಯಿಂದ ಬಚಾವಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

Join Whatsapp
Exit mobile version