- Advertisement -
ಉಳ್ಳಾಲ: ಉಳ್ಳಾಲ ಉರೂಸ್ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಉಳ್ಳಾಲ ಉರೂಸ್ ಸಮಿತಿ ನಿಯೋಗವು ಭೇಟಿ ಮಾಡಿ ಉರೂಸ್ ಪ್ರಯುಕ್ತ ಮೇ 16ರಂದು ನಡೆಯುವ ಸಾಮಾಜಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.
ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಯು.ಟಿ ಝುಲ್ಫಿಕರ್, ಸದಸ್ಯರಾದ ಅಬ್ದುಲ್ ಖಾದರ್ ಅವೂದಿ, ಉರೂಸ್ ಪ್ರಚಾರ ಸಮಿತಿ ಸದಸ್ಯರಾದ ಸೈಯದ್ ಕುಬೈಬ್ ತಂಙಳ್, ರಮೀಝ್ ಉಪಸ್ಥಿತರಿದ್ದರು.
- Advertisement -
ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ರವರ 22ನೇ ಪಂಚವಾರ್ಷಿಕ 432ನೇ ವಾರ್ಷಿಕ ಉರೂಸ್ ಸಮಾರಂಭವು ಎಪ್ರಿಲ್ 24ರಿಂದ ಪ್ರಾರಂಭಗೊಂಡು ಮೇ 18 ರ ತನಕ ನಡೆಯಲಿದೆ.