Home ಟಾಪ್ ಸುದ್ದಿಗಳು ಉಕ್ರೇನ್ ಬಿಕ್ಕಟ್ಟು: ಜೀವ ಉಳಿಯಬೇಕಾದರೆ 600 ಕಿ.ಮೀ ನಡೆಯಬೇಕು ಭಾರತೀಯ ವಿದ್ಯಾರ್ಥಿಗಳು !

ಉಕ್ರೇನ್ ಬಿಕ್ಕಟ್ಟು: ಜೀವ ಉಳಿಯಬೇಕಾದರೆ 600 ಕಿ.ಮೀ ನಡೆಯಬೇಕು ಭಾರತೀಯ ವಿದ್ಯಾರ್ಥಿಗಳು !

ಕೀವ್: ಯುದ್ಧ ಪೀಡಿತ ಉಕ್ರೇನ್’ನ ಸುಮಿಯಲ್ಲಿ ಸಿಲುಕಿರುವ ಭಾರತೀಯ ಸಂತ್ರಸ್ತ ವಿದ್ಯಾರ್ಥಿಗಳ ಜೀವ ಉಳಿಯಬೇಕಾದರೆ ಸುಮಾರು 600 ಕಿ.ಮೀ ನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂಬ ಅಘಾತಕಾರಿ ಅಂಶ ಬಹಿರಂಗವಾಗಿದೆ.

ರಷ್ಯಾ ಅಧ್ಯಕ್ಷ ಕದನ ವಿರಾಮ ಘೋಷಣೆಯ ಬೆನ್ನಲ್ಲೇ, ವ್ಯವಸ್ಥೆಯಲ್ಲಿನ ಕೊರತೆಯಿಂದಾಗಿ ಉಕ್ರೇನ್’ನ ಸುಮಿಯಲ್ಲಿ ಸಿಲುಕಿರುವ ಅಸಹಾಯಕ ಭಾರತೀಯ ವಿದ್ಯಾರ್ಥಿಗಳು 600 ಕಿ.ಮೀ ನಡೆಯಬೇಕಾಗಿದೆ ಎಂದು ಹೇಳಲಾಗಿದೆ.

ನಾಗರಿಕರ ಸುರಕ್ಷಿತ ನಿರ್ಗಮನಕ್ಕಾಗಿ ಮಾನಮೀಯ ನೆಲೆಯಲ್ಲಿ ಕಾರಿಡಾರ್ ಗಳನ್ನು ಪ್ರಯತ್ನದ ಭಾಗವಾಗಿ ರಷ್ಯಾದ ಅಧ್ಯಕ್ಷ ಪುತಿನ್ ಮಾರಿಯುಪೋಲ್ ಮತ್ತು ವೊಲ್ನೋವಾಖಾ ಎಂಬಲ್ಲಿ ಕದನ ವಿರಾಮವನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಶೆಲ್ ದಾಳಿ, ಬೀದಿ ಕಾಳಗ ಮತ್ತು ಬಾಂಬ್ ಸ್ಫೋಟದಿಂದಾಗಿ ಭಯಭೀತರಾಗಿದ್ದ ವಿದ್ಯಾರ್ಥಿಗಳು ಮರಿಯುಪೋಲ್ ಎಂಬಲ್ಲಿನ ಗಡಿ ಪ್ರದೇಶಕ್ಕೆ ನಡೆಯಲು ನಿರ್ಧರಿಸಿದ್ದಾರೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಯಾತ್ರೆಯ ವೇಳೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ ಮತ್ತು ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದೇವೆ. ನಮ್ಮ ರಕ್ಷಣೆಗೆ ಅಗತ್ಯ ಕ್ರಮವನ್ನು ತೆಗೆಯುವಲ್ಲಿ ಭಾರತ ಸರ್ಕಾರ ಎಡವಿದ್ದು, ನಮ್ಮ ಜೀವಕ್ಕೇನಾದರೂ ಸಂಭವಿಸಿದಲ್ಲಿ ಸರ್ಕಾರ ಮತ್ತು ರಾಯಭಾರಿ ಕಚೇರಿ ನೇರ ಹೊಣೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

Join Whatsapp
Exit mobile version