Home ಕ್ರೀಡೆ ಅಮೆರಿಕ ಸ್ವಾತಂತ್ರ್ಯ ದಿನದಂದು ಶ್ವೇತಭವನದಲ್ಲಿ UFC ಫೈಟ್: ಟ್ರಂಪ್

ಅಮೆರಿಕ ಸ್ವಾತಂತ್ರ್ಯ ದಿನದಂದು ಶ್ವೇತಭವನದಲ್ಲಿ UFC ಫೈಟ್: ಟ್ರಂಪ್

0

ವಾಷಿಂಗ್ಟನ್‌: ದೇಶದ 250ನೇ ಸ್ವಾತಂತ್ರ್ರೋತ್ಸವದ ಪ್ರಯುಕ್ತ ಶ್ವೇತಭವನದಲ್ಲಿ ಅಲ್ಟಿಮೇಟ್‌ ಫೈಟಿಂಗ್ ಚಾಂಪಿಯನ್‌ಷಿಪ್‌ (ಯುಎಫ್‌ಸಿ) ಆಯೋಜಿಸಲು ಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಸ್ವಾತಂತ್ರ್ಯ ದಿನಕ್ಕೂ (ಜುಲೈ 4) ಒಂದು ದಿನ ಮೊದಲು ಐಒವಾ ರಾಜ್ಯದ ಡೆಸ್ ಮೊಯಿನ್ಸ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ ಟ್ರಂಪ್‌ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ಯುಎಫ್‌ಸಿ ಅಧ್ಯಕ್ಷ ಡಾನಾ ವೈಟ್‌ ಅವರನ್ನು ತಮ್ಮ ಆಪ್ತ ಸ್ನೇಹಿತ ಎಂದಿರುವ ಟ್ರಂಪ್‌, ‘ನಾವು ಶ್ವೇತಭವನದ ಆವರಣದಲ್ಲಿ ಯುಎಫ್‌ಸಿ ಕಾಳಗ ನಡೆಸಲಿದ್ದೇವೆ. ಅದರ ಬಗ್ಗೆ ಯೋಚಿಸಿ’ ಎಂದು ಹೇಳಿದ್ದಾರೆ.

‘ನಮಗೆ ಅಲ್ಲಿ ಸಾಕಷ್ಟು ಜಾಗವಿದೆ. 250ನೇ ವರ್ಷಾಚರಣೆ ಪ್ರಯುಕ್ತ ಚಾಂಪಿಯನ್‌ಷಿಪ್‌ ಆಯೋಜಿಸಲಿದ್ದೇವೆ’ ಎಂದಿದ್ದಾರೆ.

ಯುಎಫ್‌ಸಿ ಅಭಿಮಾನಿಯಾಗಿರುವ ಟ್ರಂಪ್‌, ಜೂನ್‌ನಲ್ಲಿ ನ್ಯೂಜೆರ್ಸಿಯಲ್ಲಿ ನಡೆದ ಸೆಣಸಾಟವನ್ನು ವೀಕ್ಷಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version