Home ಟಾಪ್ ಸುದ್ದಿಗಳು ಉಡುಪಿ ಹತ್ಯೆ: ಠಾಣೆಗೆ ತೆರಳಿ ಪೊಲೀಸ್‌ ಇಲಾಖೆಗೆ ಧನ್ಯವಾದ ಸಲ್ಲಿಸಿದ ಕುಟುಂಬ

ಉಡುಪಿ ಹತ್ಯೆ: ಠಾಣೆಗೆ ತೆರಳಿ ಪೊಲೀಸ್‌ ಇಲಾಖೆಗೆ ಧನ್ಯವಾದ ಸಲ್ಲಿಸಿದ ಕುಟುಂಬ

ಉಡುಪಿ: ತಾಯಿ ಮತ್ತು ಮೂರು ಮಕ್ಕಳನ್ನು ಬರ್ಬರವಾಗಿ ಇರಿದು ಕೊಲೆ ಮಾಡಿ ದೂರ ಅಡಗಿಕೊಂಡಿದ್ದ ಆರೋಪಿಯನ್ನು ಕ್ಷಿಪ್ರವಾಗಿ ಪತ್ತೆ ಮಾಡಿದ ಉಡುಪಿ ಪೊಲೀಸ್‌ ಇಲಾಖೆಗೆ ಮೃತರ ಕುಟುಂಬ ಧನ್ಯವಾದ ಸಲ್ಲಿಸಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರನ್ನು ಭೇಟಿಯಾದ ಕುಟುಂಬ ಧನ್ಯವಾದ ಸಲ್ಲಿಸಿದೆ.

ಮನೆ ಯಜಮಾನ ನೂರ್ ಮುಹಮ್ಮದ್, ಅವರ ಮಗ ಅಸಾದ್, ಮೃತ ಹಸೀನಾ ಸಹೋದರ ಅಶ್ರಫ್, ಅವರ ಮಗಳು ಫಾತಿಮಾ ಅಸ್ಯಾ ಸಂಬಂಧಿಕ ಯಾಸೀನ್ ಮತ್ತು ಕಾಂಗ್ರೆಸ್ ಮುಖಂಡ ಎಂ.ಎ.ಗಫೂ‌ರ್ ಜೊತೆಯಾಗಿ ತೆರಳಿ ಎಸ್ಪಿಯವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಈ ಸಂದರ್ಭ ನೂರ್ ಮುಹಮ್ಮದ್ ಎಸ್ಪಿಗೆ ಕುರ್‌ಆನ್ ಪ್ರತಿ ನೀಡಿದರೆ, ಫಾತಿಮಾ ಅಸ್ಸಾ ಮಲಾಲ ಕುರಿತ ಪುಸ್ತಕವನ್ನು ನೀಡಿದ್ದಾರೆ.

Join Whatsapp
Exit mobile version