Home ಕರಾವಳಿ ಉಡುಪಿ: ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಎನ್ ಸಿಸಿ ತಂಡ ಪ್ರತಿನಿಧಿಸಿದ ಮೆಹಕ್ ಫಾತಿಮಾ...

ಉಡುಪಿ: ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಎನ್ ಸಿಸಿ ತಂಡ ಪ್ರತಿನಿಧಿಸಿದ ಮೆಹಕ್ ಫಾತಿಮಾ ಶೈಖ್

ಉಡುಪಿ: ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕ ಹಾಗೂ ಗೋವಾ ಎನ್ಸಿಸಿ ತಂಡವನ್ನು ಉಡುಪಿಯ ಮೆಹಕ್ ಫಾತಿಮಾ ಶೈಖ್ ಪ್ರತಿನಿಧಿಸಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಮೆಹಕ್ ಫಾತಿಮಾ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಐಡಿಸಿ (ಇಂಡಿಪೆಂಡೆಂಟ್ ಡೇ ಕ್ಯಾಂಪ್) ಪೂರ್ವ ಶಿಬಿರವನ್ನು ಯಶಸ್ವಿಯಾಗಿ ಪುರೈಸಿದ್ದರು.

ಇವರು ಆಗಸ್ಟ್ 1ರಿಂದ 15ರ ತನಕ ದೆಹಲಿಯಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಮತ್ತು ಗೋವಾ ಎನ್ಸಿಸಿ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ 42 ಮಂದಿಯ ಪೈಕಿ ಮೆಹಕ್ ಒಬ್ಬರಾಗಿದ್ದಾರೆ.

ಮೆಹಕ್ ಉಡುಪಿಯ ಪೌಝಿಯಾ ಶೇಖ್ ಪುತ್ರಿಯಾಗಿದ್ದಾರೆ.

Join Whatsapp
Exit mobile version