Home ಕರಾವಳಿ ಉಡುಪಿ | ಮೇ 14ರಿಂದ 18ರವರೆಗೆ ಮಾವು ಮೇಳ

ಉಡುಪಿ | ಮೇ 14ರಿಂದ 18ರವರೆಗೆ ಮಾವು ಮೇಳ

0

ಉಡುಪಿ: ಸೀಕೋ ಮತ್ತು ಯು.ಬಿ. ಫ್ರೂಟ್ಸ್, ಮಂಗಳೂರು ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಮೇ 14 ರಿಂದ 18 ರವರೆಗೆ ಐದು ದಿನಗಳ “ಮಾವು ಮೇಳ-2025” ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ.


ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೀಕೋ ಮತ್ತು ಯು.ಬಿ. ಫ್ರೂಟ್ಸ್ ಪಾಲುದಾರ ಅಬ್ದುಲ್ ಕುಂಞಿ, ಮಾವು ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ ಮಾರಾಟಕ್ಕೆ ಲಭ್ಯವಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಸಹಿತ ಹಲವು ರುಚಿಕರ ಮತ್ತು ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಖರೀದಿಗೆ ಲಭ್ಯವಿರಲಿದೆ, ಆಂಧ್ರ ಪ್ರದೇಶದ ಇಮಾಮ್ ಪಸಂದ್ ವಿಶೇಷ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದೆ ಎಂದರು.


ಸೀಕೋ ಮತ್ತು ಯುಬಿಪಿ ಸಂಸ್ಥೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಬಾರಿ ಉಡುಪಿಯಲ್ಲಿ ವಿಜೃಂಭಣೆಯಮಾವಿನ ಮೇಳೆ ಆಯೋಜಿಸಿದೆ. ಸೀಕೋ ಮತ್ತು UB ಸಂಸ್ಥೆ ಈ ಬಾರಿ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ತಾಜಾ ಹಾಗೂ ಆರೋಗ್ಯಕರ ಮಾವಿನ ಹಣ್ಣುಮಾರಾಟ ಮಾಡುವ ಉದ್ದೇಶದಿಂದ ಇಲಾಖೆಯ ಅನುಮತಿ ಪಡೆದು ಮಾವಿನ ಮೇಳ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಮೇ 14ರಂದು ಸಂಜೆ 4 ಗಂಟೆಗೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಸಮೀರ್ ಸೀಕೋ, ಸಿದ್ದೀಕ್ ಹಾಗೂ ಮ್ಯಾನೇಜರ್ ಮೊಹಮ್ಮದ್ ಹ್ಯಾರಿಸ್ ಕುದ್ರೋಳಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version