Home ಕರಾವಳಿ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಅಂಬೇಡ್ಕರ್ ವಿಚಾರಧಾರೆಯಲ್ಲಿ ಮುನ್ನಡೆಯಿರಿ | ಭಂತೇಜಿ ಭೋಧಿಚಿತ್ತ

ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಅಂಬೇಡ್ಕರ್ ವಿಚಾರಧಾರೆಯಲ್ಲಿ ಮುನ್ನಡೆಯಿರಿ | ಭಂತೇಜಿ ಭೋಧಿಚಿತ್ತ


ಉಡುಪಿ : ಜಾತಿ ಅಸಮಾನತೆ ಮತ್ತು ಜಾತಿ ದೌರ್ಜನ್ಯವನ್ನು ಪ್ರಬಲವಾಗಿ ವಿರೋಧಿಸಿ, ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯಲಾರೆ ಎಂದು ಭಾರತದಲ್ಲಿ ಹುಟ್ಟಿ ಸಮಾನತೆ ಸ್ವಾತಂತ್ಯ ಸಹೋದರತೆಯ ಮಾನವೀಯ ಮೌಲ್ಯಗಳನ್ನು ಸಾರಿದ ಬೌದ್ಧ ಧರ್ಮವನ್ನು ನಾಗಪುರದ ಧೀಕ್ಷಾ ಭೂಮಿಯಲ್ಲಿ ಸ್ವೀಕರಿಸಿ 65 ವರ್ಷ ಸಂದ ಸವಿ ನೆನಪಿಗಾಗಿ ‘ ಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಅಂಬೇಡ್ಕರ್ವಾದ ಉಡುಪಿ ಜಿಲ್ಲೆ ‘ಬೌದ್ಧ ಮಹಾಸಭಾ,ಮತ್ತು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯ ಬುದ್ಧ ವಂದನೆ ಮತ್ತುಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಬೆಂಗಳೂರು ಮಹಾಬೋಧಿ ಸೊಸೈಟಿಯ ಬಂತೇಜಿ ಬೋಧಚಿತ್ರ ಮತ್ತು ಭಂತೇಜಿ ಜ್ಞಾನರತ್ನ ನೂರಾರು ಮಂದಿಗೆ ಬೌದ್ಧದೀಕ್ಷೆ ನೀಡಿ ಆಶೀರ್ವದಿಸಿದರು.


ಉಡುಪಿಯ ಇತಿಹಾಸದಲ್ಲಿ 54 ಮಂದಿ ಬೌದ್ಧ ಭಿಕ್ಷು ಗಳು ಬುದ್ದ ವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.


ಅಧ್ಯಕ್ಷತೆಯನ್ನು ಶ್ರೀ ಸುಂದರ ಮಾಸ್ತರ ದಸಂಸ ಅಂಬೇಡ್ಕರ್ವಾದ ಜಿಲ್ಲಾ ಸಂಚಾಲಕರು ‘ಬೌದ್ಧ ಮಹಾಸಭಾದ ಉಪಾಸಕ ಶಂಭು ಮಾಸ್ತರ್, ಉಪಾಸಕ ಮಂಜುನಾಥ್’ ‘ಉಪಾಸಕ ಲಕ್ಷ್ಮಣ ಮಂಗಳೂರು,ಶ್ಯಾಮರಾಜಬಿರ್ತಿ ‘ಎಸ್ಎಸ್ ಪ್ರಸಾದ್,ಭಾಸ್ಕರ್ ಮಾಸ್ತರ್,,ಆನಂದ ಬ್ರಹ್ಮವಾರ ‘ಶಂಕರ ದಾಸ್ ಚೆಂಡ್ಕಳ ‘ಪುಷ್ಪಕರ ಕೊರಂಗ್ರಪಾಡಿ, ರಮೇಶ ಸುಭಾಸ ನಗರ, ಮಂಜುನಾಥ ಬಾಳ್ಳು ದ್ರು ರಾಜೇಂದ್ರನಾಥ, ರಾಘವ ಕೊಟ್ಯಾನ್, ಶ್ರೀಧರ ಕುಂಜಿಬೆಟ್ಟು, ಉಪಸ್ಥಿತರಿದ್ದರು

Join Whatsapp
Exit mobile version