Home ಟಾಪ್ ಸುದ್ದಿಗಳು ನಡು ರಸ್ತೆಯಲ್ಲೇ ತಲವಾರು ಝಳಪಿಸಿ ನೃತ್ಯ ಮಾಡಿದ ಸಂಘಪರಿವಾರದ ಕಾರ್ಯಕರ್ತರು: ಪೊಲೀಸರ ಮೌನಕ್ಕೆ ವ್ಯಾಪಕ ಆಕ್ರೋಶ

ನಡು ರಸ್ತೆಯಲ್ಲೇ ತಲವಾರು ಝಳಪಿಸಿ ನೃತ್ಯ ಮಾಡಿದ ಸಂಘಪರಿವಾರದ ಕಾರ್ಯಕರ್ತರು: ಪೊಲೀಸರ ಮೌನಕ್ಕೆ ವ್ಯಾಪಕ ಆಕ್ರೋಶ

ಬೆಳಗಾವಿ: ಸಂಘಪರಿವಾರದ ಕಾರ್ಯಕರ್ತರು ರಸ್ತೆಯಲ್ಲಿ ತಲವಾರು ಝಳಪಿಸುತ್ತಾ ನೃತ್ಯಮಾಡಿದ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.


ನಿನ್ನೆಯಷ್ಟೇ ಮಂಗಳೂರಿನಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಶಸ್ತ್ರ ಪೂಜೆ ಮತ್ತು ತ್ರಿಶೂಲ ದೀಕ್ಷೆಯ ನೆಪದಲ್ಲಿ ನೂರಾರು ಕಾರ್ಯಕರ್ತರಿಗೆ ಸಂಘಪರಿವಾರದ ನಾಯಕರು ತ್ರಿಶೂಲ ನೀಡಿದ್ದರು. ಇದರ ಬೆನ್ನಲ್ಲೇ ಬೆಳಗಾವಿಯಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬಹಿರಂಗವಾಗಿ ತಲವಾರು ಝಳಪಿಸಿ ನೃತ್ಯ ಮಾಡಿದ್ದರೂ ಪೊಲೀಸ್ ಇಲಾಖೆ ವಹಿಸಿರುವ ಮೌನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version