Home ಟಾಪ್ ಸುದ್ದಿಗಳು ತನಿಖಾ ಸಂಸ್ಥೆಗಳು ‘ಸುಪಾರಿ’ ಪಡೆದು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದೆ: ಉದ್ಧವ್ ಠಾಕ್ರೆ ಆರೋಪ

ತನಿಖಾ ಸಂಸ್ಥೆಗಳು ‘ಸುಪಾರಿ’ ಪಡೆದು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದೆ: ಉದ್ಧವ್ ಠಾಕ್ರೆ ಆರೋಪ

ಮುಂಬೈ: ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದಿಂದ ದಿಂದ ‘ಸುಪಾರಿ’ ಪಡೆದು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದೆ ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ 101 ದಿನಗಳ ಸೆರೆವಾಸದ ನಂತರ ಬಿಡುಗಡೆಯಾದ ಶಿವಸೇನೆ ಸಂಸದ ಸಂಜಯ್ ರಾವತ್  ಗುರುವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಖಾಸಗಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಮಾಧ್ಯಮಗಗಳೊಂದಿಗೆ ಮಾತನಾಡಿದ ಠಾಕ್ರೆ, ಈ ಕೇಂದ್ರೀಯ ಏಜೆನ್ಸಿಗಳು ಯಾವುವು? ಅವರು ಕೇಂದ್ರದ ‘ಸಾಕು ಪ್ರಾಣಿಗಳಂತೆ’ ವರ್ತಿಸುತ್ತಾರೆ. ಯಾರನ್ನು ಹೇಳಿದರೂ ಅವರನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳು ಸುಪಾರಿ ಪಡೆದುಕೊಳ್ಳುತ್ತಿದ್ದಾರೆ. ಈ ಫೆಡರಲ್ ತನಿಖಾ ಸಂಸ್ಥೆಗಳನ್ನು ಏಕೆ ಮುಚ್ಚಬಾರದು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ವಿರೋಧಿಗಳ ವಿರುದ್ಧ ಬಿಜೆಪಿ ಸರಕಾರ ಸಿಬಿಐ, ಇಡಿ, ಐಟಿ, ಎನ್ಸಿಬಿ ಮತ್ತು ಎನ್ಐಎಯಂತಹ ಏಜೆನ್ಸಿಗಳನ್ನು ಬಳಸುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

Join Whatsapp
Exit mobile version