Home ಟಾಪ್ ಸುದ್ದಿಗಳು ಆಧಾರ್ ನಿಯಮಕ್ಕೆ ತಿದ್ದುಪಡಿ ತಂದ ಸರ್ಕಾರ

ಆಧಾರ್ ನಿಯಮಕ್ಕೆ ತಿದ್ದುಪಡಿ ತಂದ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ಆಧಾರ್ ನೋಂದಣಿ ಮತ್ತು ನವೀಕರಣ  ನಿಯಮಗಳಲ್ಲಿ ತಿದ್ದುಪಡಿ ಮಾಡಿದ್ದು, ಆಧಾರ್ ಪಡೆದು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅದರ ದಾಖಲೆಗಳನ್ನು ಕನಿಷ್ಠ ಒಮ್ಮೆಯಾದರೂ ನವೀಕರಿಸಬೇಕು ಎಂದು ಹೇಳಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ದಾಖಲೆಗಳ ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿಆಧಾರ್-ಸಂಬಂಧಿತ ಮಾಹಿತಿಯ “ನಿಖರತೆಯನ್ನು” ಖಚಿತಪಡಿಸುತ್ತದೆ.

ಆಧಾರ್ ಸಂಖ್ಯೆ ಹೊಂದಿರುವವರು, ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ಗುರುತಿನ ಪುರಾವೆ(ಪಿಒಐ) ಮತ್ತು ವಿಳಾಸದ ಪುರಾವೆ(ಪಿಒಎ) ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಪೂರಕ ದಾಖಲೆಗಳನ್ನು ನವೀಕರಿಸಬೇಕು. ಇದರಿಂದ ಸಿಐಡಿಆರ್ ನಲ್ಲಿ ಅವರ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅದು ಹೇಳಿದೆ.

Join Whatsapp
Exit mobile version