Home ಟಾಪ್ ಸುದ್ದಿಗಳು ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿ ಯುಎಇ ಭೇಟಿ: ರಾಜಕುಮಾರಿ ಹೆಂದ್ ರಿಂದ #SudhirNotWelcomeInUAE ಟ್ವಿಟ್ಟರ್...

ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿ ಯುಎಇ ಭೇಟಿ: ರಾಜಕುಮಾರಿ ಹೆಂದ್ ರಿಂದ #SudhirNotWelcomeInUAE ಟ್ವಿಟ್ಟರ್ ಅಭಿಯಾನ

ದುಬೈ: ಭಾರತೀಯ ಮೂಲದ ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿ, ಯುಎಇ ಭೇಟಿಯನ್ನು ವಿರೋಧಿಸಿ ಶಾರ್ಜಾದ ಅಲ್ ಖಾಸಿಮಿ ರಾಜಮನೆತನದ ರಾಜಕುಮಾರಿ ಹೆಂದ್ ಬಿಂತ್ ಫೈಝಲ್ ಅವರು ಟ್ವಿಟ್ಟರ್ ನಲ್ಲಿ #SudhirNotWelcomeInUAE ಟ್ರೆಂಡಿಂಗ್ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಗುರುವಾರದ ತನ್ನ ಟ್ವೀಟ್ ನಲ್ಲಿ ರಾಜಕುಮಾರಿ ಹೆಂದ್, ತನ್ನ ದೇಶಕ್ಕೆ ಇಸ್ಲಾಮೋಫೋಬಿಯಾ ಎಂದು ಹೇಳಿಕೊಳ್ಳುವ ಸುಧೀರ್ ಚೌಧರಿಯನ್ನು ಕರೆತರುವ ಸದಸ್ಯರು, ಪ್ರಾಯೋಜಕರು ಮತ್ತು ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳು ಸಮಾನ ಜವಾಬ್ದಾರರು ಎಂದು ತಿಳಿಸಿದರು.

ಸುಧೀರ್ ಎಂಬಾತ ಇಸ್ಲಾಮ್ ಧರ್ಮ, ಅಲ್ಲಾಹ್, ಪ್ರವಾದಿ ಮತ್ತು ದೇಶವನ್ನು ಅವಮಾನಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ನಾನು ಇನ್ನು ಸುಮ್ಮನಿರುವುದಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸುಧೀರ್ ಅವರನ್ನು ಯುಎಇಗೆ ಆಹ್ವಾನಿಸಿದ್ದಕ್ಕಾಗಿ ಕಾರ್ಯಕ್ರಮದ ಆಯೋಜಕರನ್ನು ರಾಜಕುಮಾರಿ ಹೆಂದ್, ತನ್ನ ಚಾನೆಲ್ ನಲ್ಲಿ ಇಸ್ಲಾಮ್ ವಿರುದ್ಧ ದ್ವೇಷವನ್ನು ಹರಡಿದ ಆ್ಯಂಕರ್ ಸುಧೀರ್ ಚೌಧರಿಯನ್ನು ಭಯೋತ್ಪಾದಕ ಎಂದು ಜರಿದಿದ್ದರು.

Join Whatsapp
Exit mobile version