Home ಕರಾವಳಿ ಜಗದೀಶ್ ಕಾರಂತನ ವಿರುದ್ಧ ಜಿಲ್ಲಾಧಿಕಾರಿ ದೂರು| ವಾಪಸ್ ಪಡೆಯುವಂತೆ ಮತ್ತೊಮ್ಮೆ ಬೆದರಿಕೆ ಹಾಕಿದ ಹಿಂದೂ ಜಾಗರಣಾ...

ಜಗದೀಶ್ ಕಾರಂತನ ವಿರುದ್ಧ ಜಿಲ್ಲಾಧಿಕಾರಿ ದೂರು| ವಾಪಸ್ ಪಡೆಯುವಂತೆ ಮತ್ತೊಮ್ಮೆ ಬೆದರಿಕೆ ಹಾಕಿದ ಹಿಂದೂ ಜಾಗರಣಾ ವೇದಿಕೆ

ಮಂಗಳೂರು: ಇತ್ತೀಚೆಗೆ ಕಾಲರ್ ಪಟ್ಟಿ ಹಿಡಿಯುತ್ತೇವೆಂದು ಬೆದರಿಕೆ ಹಾಕಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ದ ದೂರು ನೀಡಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಗೆ ಹಿಂದೂ ಜಾಗರಣಾ ವೇದಿಕೆಯ ಮುಖಂಡರೊಬ್ಬರು ಮತ್ತೊಮ್ಮೆ ಬೆದರಿಕೆ ಹಾಕಿದ್ದು, ಕೇಸ್ ವಾಪಾಸ್ ಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾಧಿಕಾರಿ ದೂರು ನೀಡಿದ ಬಳಿಕ ಕಾರಿಂಜ ಕ್ಷೇತ್ರ ಭಗವಾಧ್ವಜ ತೆಗೆಯಲು ಪೂಂಜಾಲಕಟ್ಟೆ ಎಸ್ ಐ ಸೌಮ್ಯ ಸೂಚನೆ ನೀಡಿದ್ದಾರೆ. ನಿಮಗೆ ತಾಖತ್ ಇದ್ದರೆ ಭಗವಾಧ್ವಜ ತೆಗೆದು ನೋಡಿ. ಒಂದು ವಾರದೊಳಗೆ ಸಾವಿರ ಭಗವಾಧ್ವಜ ಹಾಕುತ್ತೇವೆ. ಜಾಸ್ತಿ ತುಳಿಯೋಕೆ ನೋಡಬೇಡಿ. ಹಿಂದೂ ಸಮಾಜ ಫುಟ್ ಬಾಲ್ ಅಲ್ಲ, ಅದೊಂದು ಕಲ್ಲು ಗುಂಡು. ತುಳಿಯೋಕೆ ನೋಡಿದರೆ ಕಾಲು ಮುರಿಯುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

Join Whatsapp
Exit mobile version