Home ಟಾಪ್ ಸುದ್ದಿಗಳು 6 ವರ್ಷಗಳ ಬಳಿಕ ಕರ್ತವ್ಯಕ್ಕೆ ಹಾಜರಾದ ಇರಾನ್’ನ ಯುಎಇ ರಾಯಭಾರಿ

6 ವರ್ಷಗಳ ಬಳಿಕ ಕರ್ತವ್ಯಕ್ಕೆ ಹಾಜರಾದ ಇರಾನ್’ನ ಯುಎಇ ರಾಯಭಾರಿ

ಟೆಹ್ರಾನ್: ಇರಾನ್’ನಲ್ಲಿನ ಯುಎಇ ರಾಯಭಾರಿ ಸೈಫ್ ಮುಹಮ್ಮದ್ ಅಲ್ ಝಾಬಿ ಅವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಕಡಿದುಕೊಂಡ ಆರು ವರ್ಷಗಳ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಟೆಹ್ರಾನ್’ನಲ್ಲಿರುವ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಯುಎಇಯ ಸೈಫ್ ಮುಹಮ್ಮದ್ ಅಲ್ ಝಾಬಿ ಅವರು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಅವರನ್ನು ಭೇಟಿಯಾದರು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವೇಳೆ ನೆರೆಹೊರೆ- ಆಧಾರಿತ ನಿಯಮಗಳ ಆಧಾರದಲ್ಲಿ ಯುಎಇಯೊಂದಿಗೆ ಸಂಬಂಧವನ್ನು ವಿಸ್ತರಿಸಲು ಇರಾನ್ ಆಸಕ್ತಿ ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಾದೇಶಿಕ ರಾಷ್ಟ್ರಗಳು ಸ್ಥಿರತೆ, ಶಾಂತಿಗಾಗಿ ಪರಸ್ಪರ ಸಹಕರಿಸುವ ಅಗತ್ಯ ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಅಭಿವೃದ್ಧಿಗೊಳಿಸುವ ಸಾಮರ್ಥ್ಯಗಳನ್ನು ಬಳಸುವ ಅಗತ್ಯವಿದೆ ಎಂದು ಅಮೀರ್ ಅಬ್ದುಲ್ಲಾಹಿಯಾನ್ ತಿಳಿಸಿದ್ದಾರೆ.

ಇದೀಗ ಇರಾನ್’ಗೆ ಮರಳಲು ನನಗೆ ಸಂತೋಷವಾಗುತ್ತಿದೆ ಎಂದ ಯುಎಇ ರಾಯಭಾರಿ ಅಮೀರ್, ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸುವಲ್ಲಿ ಎರಡೂ ದೇಶಗಳ ಆರ್ಥಿಕ ಮತ್ತು ವಾಣಿಜ್ಯ ಸಾಮರ್ಥ್ಯ ಪ್ರಮುಖ ಅಂಶಗಳಾಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಶಿಯಾ ಧರ್ಮಗುರುವೊಬ್ಬರಿಗೆ ಸೌದಿ ಅರೇಬಿಯಾವು ಮರಣದಂಡನೆ ನೀಡಿದ ಬಳಿಕ ಇರಾನ್’ನಲ್ಲಿ ಸೌದಿ ರಾಜತಾಂತ್ರಿಕ ಕಾರ್ಯಾಚರಣೆಯ ಮೇಲಿನ ದಾಳಿಯನ್ನು ಖಂಡಿಸಿ ಇರಾನ್’ನೊಂದಿಗೆ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಸೌದಿ ಕಡಿದುಕೊಂಡಿತ್ತು. ಈ ಮಧ್ಯೆ ಸೌದಿ ಅರೇಬಿಯಾವನ್ನು ಬೆಂಬಲಿಸುವ ಸಲುವಾಗಿ 2016ರಲ್ಲಿ ಅಬುಧಾಬಿ ಪ್ರಾಧಿಕಾರ ಟೆಹ್ರಾನ್’ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು.

Join Whatsapp
Exit mobile version