ದಕ್ಷಿಣ ಆಫ್ರಿಕಾ: ಭಾರತ ನೇಪಾಳ ವಿರುದ್ಧ 132 ರನ್ಗಳ ಜಯ ಸಾಧಿಸಿ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಅಂಡರ್ 19 ವಿಶ್ವಕಪ್ನಲ್ಲಿ ಭಾರತ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದಂತಾಗಿದೆ. ಅಲ್ಲದೆ, ಸತತವಾಗಿ 5ನೇ ಬಾರಿ (2016, 2018, 2020, 2022 ಹಾಗೂ ಪ್ರಸ್ತುತ ವಿಶ್ವಕಪ್) ಭಾರತ ತಂಡ ಕಿರಿಯರ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 297ರನ್ ಗಳಿಸಿತ್ತು. ನಾಯಕ ಉದಯ್ ಸಹರಾನ್ 107 ಎಸೆತಗಳಲ್ಲಿ 9 ಬೌಂಡರಿ ಸಹಿತ 100, ಸಚಿನ್ ದಾಸ್ 101 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 116 ರನ್ಗಳಿಸಿದರು.
4ನೇ ವಿಕೆಟ್ಗೆ ಉದಯ್ ಮತ್ತು ಸಚಿನ್ ವಿಶ್ವದಾಖಲೆಯ 215ರನ್ಗಳ ನೆರವಿನಿಂದ ಭಾರತ ತಂಡ 297ರನ್ ದಾಖಲಿಸಿತು. ನೇಪಾಳ ಪರ ಗುಲ್ಸನ್ ಝಾ 56ರನ್ ನೀಡಿ 3 ವಿಕೆಟ್ ಪಡೆದರು.
ಇನ್ನೂ 298ರನ್ಗಳ ಬಲಿಷ್ಠ ಗುರಿಯನ್ನು ನೀಡಿದ್ದ ಭಾರತ ತಂಡ ನೇಪಾಳವನ್ನು ಕೇವಲ 165ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿ 132ರನ್ಗಳ ಬೃಹತ್ ಜಯ ಸಾಧಿಸಿತು. ಭಾರತದ ಪರ ಸೌಮಿ ಪಾಂಡೆ 29ಕ್ಕೆ 4, ಅರ್ಶಿನ್ ಕುಲಕರ್ಣಿ 18ಕ್ಕೆ 2, ರಾಜ್ ಲಿಂಬಾನಿ, ಆರಾಧ್ಯ ಶುಕ್ಲಾ, ಮುರುಗನ್ ಅಭಿಷೇಕ್ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ನೇಪಾಳ ಪರ ನಾಯಕ ದೇವ್ ಖನಾಲ್ 33, ಅರ್ಜುನ್ ಕುಮಾಲ್ 26, ದೀಪಕ್ ಬೊಹಾರ 22 ದುರ್ಗೇಶ್ ಗುಪ್ತಾ 29ರನ್ಗಳಿಸಿದರು.