Home ಟಾಪ್ ಸುದ್ದಿಗಳು ಕಾರು ಬೈಕ್ ಡಿಕ್ಕಿ ಇಬ್ಬರು ಕಾರ್ಮಿಕರು ಸಾವು

ಕಾರು ಬೈಕ್ ಡಿಕ್ಕಿ ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು : ಕಾರು ಹಾಗೂ‌ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ‌ ಇಬ್ಬರು ಕೂಲಿ‌ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ದೊಡ್ಡಬಳ್ಳಾಪುರದ ತಪಸೀಹಳ್ಳಿ ಗೇಟ್‌ ಬಳಿ ನಡೆದಿದೆ.
ಬಿಹಾರ ಮೂಲದ ಅನಿಲ್‌ ಪಾಸ್ವಾನ್‌ (41), ದಿನೇಶ್‌ (35) ಮೃತಪಟ್ಟವರು. ಅಪಘಾತದ ಬಳಿಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.


ಅನಿಲ್‌ ಹಾಗೂ ದಿನೇಶ್‌ ಹುಣಸಮಾರನಹಳ್ಳಿಯಲ್ಲಿ ನೆಲೆಸಿದ್ದು ಟೈಲ್ಸ್‌ ಕೆಲಸ ಮಾಡುತ್ತಿದ್ದರು ನಿನ್ನೆ ಗೌರಿಬಿದನೂರಿಗೆ ಕೆಲಸಕ್ಕೆ ಹೋಗಿ, ಒಂದೇ ಬೈಕ್‌ನಲ್ಲಿ ವಾಪಸ್‌ ಬರುತ್ತಿದ್ದರು.
ಮಾರ್ಗ ಮಧ್ಯೆ ರಾತ್ರಿ 10.45ರ ಸುಮಾರಿಗೆ ತಪಸೀಹಳ್ಳಿ ಗೇಟ್‌ ಬಳಿ ದೊಡ್ಡಬಳ್ಳಾಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version