Home ಮಾಹಿತಿ ಹಿಂದೂ ವಾಟ್ಸಪ್ ಗ್ರೂಪ್ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ: ಇಬ್ಬರು IAS ಅಧಿಕಾರಿಗಳು ಅಮಾನತು

ಹಿಂದೂ ವಾಟ್ಸಪ್ ಗ್ರೂಪ್ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ: ಇಬ್ಬರು IAS ಅಧಿಕಾರಿಗಳು ಅಮಾನತು

ತಿರುವನಂತಪುರಂ: ಧರ್ಮ ಆಧಾರಿತ ವಾಟ್ಸಪ್ ಗ್ರೂಪ್ ರಚನೆ, ಹಿರಿಯ ಅಧಿಕಾರಿ ವಿರುದ್ಧ ಟೀಕೆ ಆರೋಪದ ಮೇಲೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇರಳ ಸರ್ಕಾರ ಅಮಾನತು ಮಾಡಿದೆ.


ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾದ ಕೆ. ಗೋಪಾಲಕೃಷ್ಣನ್ ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ಮಾಡಿದ್ದರು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪ್ರಶಾಂತ್ ಅವರು ಹಿರಿಯ ಅಧಿಕಾರಿಯ ವಿರುದ್ಧ ಟೀಕೆ ಮತ್ತು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.


ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರ ವರದಿಯ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.


ಕಳೆದ ತಿಂಗಳು ‘ಮಲ್ಲು ಹಿಂದೂ ಆಫೀಸರ್ಸ್’ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಅನ್ನು ರಚಿಸಿದ್ದಕ್ಕಾಗಿ 2013ರ ಬ್ಯಾಚ್ ಅಧಿಕಾರಿ ಗೋಪಾಲಕೃಷ್ಣನ್ ಅವರನ್ನು ಅಮಾನತುಗೊಳಿಸಲಾಗಿದೆ. ಐಎಎಸ್ ಅಧಿಕಾರಿ ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಅಧಿಕಾರಿಗಳ ಪ್ರಕಾರ, ಫೋನ್ ನ ಫೊರೆನ್ಸಿಕ್ ಪರೀಕ್ಷೆಯು ಅದನ್ನು ಹ್ಯಾಕ್ ಮಾಡಲಾಗಿದೆ ಎಂದು ದೃಢಪಡಿಸಲಿಲ್ಲ.


2007 ರ ಬ್ಯಾಚ್ ಅಧಿಕಾರಿ ಎನ್.ಪ್ರಶಾಂತ್ ಪ್ರಕರಣದಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ವಿರುದ್ಧ ಫೇಸ್ಬುಕ್ ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.

Join Whatsapp
Exit mobile version