Home ಟಾಪ್ ಸುದ್ದಿಗಳು ಒಂದೇ ಗಂಟೆಯ ಅಂತರದಲ್ಲಿ ಇಬ್ಬರು ಗೆಳತಿಯರು ಆತ್ಮಹತ್ಯೆ

ಒಂದೇ ಗಂಟೆಯ ಅಂತರದಲ್ಲಿ ಇಬ್ಬರು ಗೆಳತಿಯರು ಆತ್ಮಹತ್ಯೆ

ಮಹಾರಾಷ್ಟ್ರ : ಒಂದೇ ಕಟ್ಟಡದಲ್ಲಿ ವಾಸವಾಗಿದ್ದ 19 ವರ್ಷದ ಇಬ್ಬರು ಬಾಲ್ಯದ ಗೆಳತಿಯರು ಒಂದೇ ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಪುಣೆಯ ಹಡಪ್ಸರ್ ಪಟ್ಟಣದಲ್ಲಿ ನಡೆದಿದೆ.

ಸಂಜೆ 6:30 ರ ಸುಮಾರಿಗೆ ಕೋಣೆಯಲ್ಲಿ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಳು. ಆಕೆಯ ಶವವನ್ನು ಆಂಬ್ಯುಲೆನ್ಸ್ ನಲ್ಲಿ  ಮರಣೋತ್ತರ ಕಳುಹಿಸಲಾಗಿದ್ದು,  ಸಂಜೆ 7:30 ರ ಸುಮಾರಿಗೆ  ಆಕೆಯ ಬಾಲ್ಯದ ಗೆಳತಿ  ನಾಲ್ಕು ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅರವಿಂದ್ ಗೋಕುಲೆ ತಿಳಿಸಿದ್ದಾರೆ.

ಎರಡೂ ಸ್ಥಳಗಳಲ್ಲಿ ಯಾವುದೇ ಡೆತ್ ನೋಟು ಪತ್ತೆಯಾಗಿಲ್ಲ . ಇಬ್ಬರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಒಬ್ಬಳು  ವಾಣಿಜ್ಯ ವಿದ್ಯಾರ್ಥಿ ಮತ್ತು ಇನ್ನೊಬ್ಬಳು ಅನಿಮೇಷನ್ ಕೋರ್ಸ್ ಕಲಿಯುತ್ತಿದ್ದಳು.  ತನಿಖೆಯ ಬಳಿಕ ಹೆಚ್ಚಿನ ವಿವರಗಳು ತಿಳಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version