Home ಟಾಪ್ ಸುದ್ದಿಗಳು ಪ್ರತಿಭಟನಾ ಸ್ಥಳದಿಂದ ವಾಪಸ್ಸಾಗುವಾಗ ವಾಹನ ಅಪಘಾತ: ಇಬ್ಬರು ರೈತರು ಸಾವು

ಪ್ರತಿಭಟನಾ ಸ್ಥಳದಿಂದ ವಾಪಸ್ಸಾಗುವಾಗ ವಾಹನ ಅಪಘಾತ: ಇಬ್ಬರು ರೈತರು ಸಾವು

ನವದೆಹಲಿ: ಒಂದು ವರುಷ ಕಾಲ ನಡೆಸಿದ ಪ್ರತಿಭಟನೆ ಅಂತ್ಯಗೊಳಿಸಿ ಊರಿಗೆ ಹಿಂದಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದಾರೆ.

ದೆಹಲಿಯ ಟಿಕ್ರಿ ಗಡಿ ಬಳಿಯ ಪ್ರತಿಭಟನಾ ಸ್ಥಳದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಟ್ರಕ್ ವೊಂದು ಟ್ರ್ಯಾಕ್ಟರ್ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಂಜಾಬಿನ ಇಬ್ಬರು ರೈತರು ಮೃತಪಟ್ಟಿದ್ದಾರೆ.

ಹಿಸಾರ್ ನ ದಾಂದೂರ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.  ಮೂವರು ಗಾಯಗೋಂಡಿದ್ದು, ಓರ್ವ ರೈತ ತೀವ್ರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಪಘಾತ ಸಂಭವಿಸಿದಾಗ ಟ್ರ್ಯಾಕ್ಟರ್ ಟ್ರೈಲರ್ ನಲ್ಲಿ ಐವರು ರೈತರು ಇದ್ದರೆಂದು ಹಿಸಾರ್ ಪೊಲೀಸ್ ಇನ್ಸ್ ಪೆಕ್ಟರ್ ಕಪ್ತಾನ್ ಪಿಟಿಐ ತಿಳಿಸಿದ್ದಾರೆ. ಐವರು ರೈತರ ಪೈಕಿ ಓರ್ವ ರೈತ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ರೈತ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿರುವುದಾಗಿ ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಈ ರೈತರು ಪಂಜಾಬಿನ ಮುಕ್ತಾಸರ್ ಜಿಲ್ಲೆಯವರಾಗಿದ್ದು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ಪ್ರತಿಭಟನೆ ನಡೆಸಿ, ಕೊನೆಗೆ ವಿವಾದಾತ್ಮಾಕ ಕಾನೂನು ರದ್ದಾಗಿ ಮನೆಗೆ ಸಂತೋಷದಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Join Whatsapp
Exit mobile version