Home ಟಾಪ್ ಸುದ್ದಿಗಳು ಕುವೆಂಪು ವಿವಿ ಇತಿಹಾಸದಲ್ಲಿ ಒಂದೇ ದಿನ ಎರಡು ಘಟಿಕೋತ್ಸವ

ಕುವೆಂಪು ವಿವಿ ಇತಿಹಾಸದಲ್ಲಿ ಒಂದೇ ದಿನ ಎರಡು ಘಟಿಕೋತ್ಸವ

ಶಿವಮೊಗ್ಗ : ಕೊರೋನಾ ಅಲೆಯಿಂದಾಗಿ ದೊಡ್ಡ ಮಟ್ಟದಲ್ಲಿ ಆಘಾತಕ್ಕೊಳಗಾಗಿದ್ದ ಶಿಕ್ಷಣ ಕ್ಷೇತ್ರವು ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಹಿಂದೆ
ಭೌತಿಕ ತರಗತಿಗಳಿಲ್ಲದೆ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೇ ಶಿಕ್ಷಣ ಪಡೆಯುತ್ತಿದ್ದರು. ಇದೀಗ ಕೊರೊನಾ ಆರ್ಭಟ ಕಡಿಮೆಯಾಗಿರುವ ಕಾರಣ ಶೈಕ್ಷಣಿಕ ಚಟುವಟಿಕೆಗಳು ಈ ಮೊದಲಿನಂತೆ ನಡೆಯುತ್ತಿವೆ.

ಹೀಗಾಗಿ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಜೂನ್ 16ರಂದು ನಡೆಯುತ್ತಿದ್ದು, ಈ ಬಾರಿ ಒಂದೇ ದಿನ ಎರಡು ಘಟಿಕೋತ್ಸವಗಳು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಕೊರೊನಾ ಕಾರಣಕ್ಕೆ 2021ರಲ್ಲಿ ಘಟಿಕೋತ್ಸವ ನಡೆದಿರಲಿಲ್ಲ. ಆದ್ದರಿಂದ ಈ ಎರಡು ಘಟಿಕೋತ್ಸವವನ್ನು ಒಂದೇ ದಿನ ಮಾಡಿ ಪದವಿ ಪ್ರದಾನ ಮಾಡಲಾಗುತ್ತಿದೆ ಎನ್ನಲಾಗಿದೆ.

Join Whatsapp
Exit mobile version