Home ಟಾಪ್ ಸುದ್ದಿಗಳು ಹೈದರಾಬಾದ್’ನಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ

ಹೈದರಾಬಾದ್’ನಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ

ಹೈದರಾಬಾದ್: ಕುಟುಂಬಸ್ಥರ ವಿರೋಧದ ಮಧ್ಯೆ ಮುಸ್ಲಿಮ್ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ಯುವಕನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.. 

ಸೈಯದ್ ಮೊಬಿನ್ ಅಹ್ಮದ್ ಮತ್ತು ಮುಹಮ್ಮದ್ ಮಸೂದ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದು, ಮೊಬಿನ್ ಆಶ್ರಿನ್ ಸುಲ್ತಾನಾಳ ಸೋದರನಾಗಿದ್ದಾನೆ.

ಮೇ 4ರಂದು ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಪತ್ನಿಯ ಸಹೋದರ ಮತ್ತು ಅವರ ಸಂಬಂಧಿಯೋರ್ವ ಯುವಕನನ್ನು ನೆಲಕ್ಕೆ ತಳ್ಳಿ ರಾಡ್‌ ಗಳಿಂದ ಥಳಿಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Join Whatsapp
Exit mobile version