ಪತ್ನಿ ಕೊಲೆ ಕೇಸ್​ ಗೆ ಟ್ವಿಸ್ಟ್​: ಆ ರಾತ್ರಿ ಇಬ್ಬರ ಮಧ್ಯೆ ನಡೆದಿದ್ದೇನು?

- Advertisement -

ಬೆಂಗಳೂರು: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ಆಕೆ ದೇಹವನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿರುವ ಭಯಾನಕ ಘಟನೆ ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ.

- Advertisement -

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೇ ಮಾಹಿತಿ ಹೊರ ಬರುತ್ತಿದೆ. ಪತ್ನಿ ಗೌರಿಯನ್ನು ಕೊಲೆಗೈದ ಪತಿ ರಾಕೇಶ್, ಕೇಸ್ ಮುಚ್ಚಿ ಹಾಕಲು ಏನೆಲ್ಲ ಯೋಜನೆ ರೂಪಿಸಿದ್ದ ಅನ್ನೋದು ರಿವೀಲ್ ಆಗಿದೆ.

ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಪತಿ-ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯ ಮಧ್ಯೆ ಪತಿ ಮೇಲೆ ಪತ್ನಿ ಚಾಕು ಎಸೆದಿದ್ದಾಳಂತೆ. ನಂತರ ಕೋಪದಲ್ಲಿ ಅದೇ ಚಾಕುವಿನಿಂದ ಪತ್ನಿಯನ್ನು ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಪತ್ನಿಯ ಹೊಟ್ಟೆ, ಕತ್ತು ಕೊಯ್ದು ಸೂಟ್ ಕೇಸ್​ ಗೆ ತುಂಬಿದ. ಆ ಬಳಿಕ ಸೂಟ್ ಕೇಸ್ ಸಮೇತ ಎಸ್ಕೇಪ್​ ಆಗೋದಕ್ಕೆ ಪ್ಲಾನ್​ ಮಾಡಿದ್ದ ಎಂದು ತಿಳಿದುಬಂದಿದೆ.

- Advertisement -

ಕೊಲೆ ಮಾಡಿದ ಬಳಿಕ ಮನೆಯಲ್ಲಿ ಕೂತು ಊಟ ಮಾಡಿದ್ದಾನೆ. ರಾತ್ರಿ 11 ಗಂಟೆಯ ಬಳಿಕ ಕಾರಿಗೆ ಬಾಡಿ ಶಿಪ್ಟ್ ಮಾಡುವ ಪ್ಲಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗಿಲ್ಲ. ಹೀಗಾಗಿ ಬಾತ್​ ರೂಮಿನಲ್ಲಿ ಶವ ಇಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ. ಬಾಡಿಗೆ ಮನೆಯಿಂದ ಓಡಿ ಹೋಗುವ ವೇಳೆ ಕುಟುಂಬಸ್ಥರಿಗೆ ಕರೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಅಲ್ಲದೇ ಪಕ್ಕದ ಮನೆಯ ಬಾಡಿಗೆದಾರನಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಮಹಾರಾಷ್ಟ್ರಕ್ಕೆ ಪರಾರಿ ಆಗಿದ್ದಾನೆ. ಬಳಿಕ ಪಕ್ಕದ ಮನೆಯ ಬಾಡಿಗೆದಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್, ಎರಡು ವರ್ಷದ ಹಿಂದಷ್ಟೆ ಮದುವೆ ಆಗಿದ್ದರು. ಬದುಕು ಸಾಗಿಸಲು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು, ಪತಿ ರಾಕೇಶ್​ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸವನ್ನು ಹುಡುಕುತ್ತಿದ್ದಳು. 1 ತಿಂಗಳ ಹಿಂದಷ್ಟೇ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದರು. ಪತಿ ರಾಕೇಶ್​ ವರ್ಕ್​ ಫ್ರಮ್​ ಹೋಮ್ ಕೆಲಸ​ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಹುಳಿಮಾವು ಪೊಲೀಸರು ಸಿಡಿಆರ್​ ಆಧರಿಸಿ ಮಹಾರಾಷ್ಟ್ರದ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಶೋಧಕಾರ್ಯ ನಡೆಸಿದಾಗ ರಾಕೇಶ್ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಣೆ ಪೊಲಿಸರ ವಶದಲ್ಲಿರುವ ರಾಕೇಶ್ ನನ್ನು ಬೆಂಗಳೂರಿಗೆ ಕರೆತರಲು ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳುತ್ತಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ನಂತರ ಪತ್ನಿಯ ಹತ್ಯೆ ಮಾಡಿದ ಕಾರಣ ತಿಳಿದುಕೊಳ್ಳಲು ಪೊಲೀಸರು ಆತನನನ್ನು ವಿಚಾರಣೆ ನಡೆಸಲಿದ್ದಾರೆ.

ಶವಾಗಾರಕ್ಕೆ ಮೃತದೇಹ ರವಾನೆ:

‘ಗೌರಿ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

6 ತಿಂಗಳಲ್ಲಿ ಎರಡನೇ ಪ್ರಕರಣ

ನಗರದ ಮಲ್ಲೇಶ್ವರದ ಪೈಪ್‌ ಲೈನ್‌ನ ಕೆ.ವಿ.ರಸ್ತೆಯ ಬಾಡಿಗೆ ಮನೆಯಲ್ಲಿ ನೆಲಸಿದ್ದ ಮಹಾಲಕ್ಷ್ಮಿ ಎಂಬುವವರನ್ನು ಸೆಪ್ಟೆಂಬರ್‌ ನಲ್ಲಿ 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್‌ ನಲ್ಲಿ ಬಚ್ಚಿಟ್ಟಿದ್ದ ಪ್ರಕರಣದ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ. ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿದ ಬಳಿಕ ಆರೋಪಿ ಹೊರ ರಾಜ್ಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದ.

- Advertisement -


Must Read

Related Articles