ಟರ್ಕಿ ಭೂಕಂಪ| ನಿರಾಶ್ರಿತರಾದ 1.5 ಮಿಲಿಯನ್ ಜನರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಸಿದ್ಧತೆ

Prasthutha|

ಅಂಕಾರಾ: ಭೂಕಂಪದಿಂದ ಹಲವಾರು ಮನೆಗಳು ಧರೆಗುರುಳಿದ್ದು, ನಿರಾಶ್ರಿತರಾದ 1.5 ಮಿಲಿಯನ್ ಜನರ ಮನೆ ನಿರ್ಮಾಣ ಕಾರ್ಯಕ್ಕೆ ಟರ್ಕಿ ಸರಕಾರ ಸಿದ್ಧತೆ ನಡೆಸಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಒಟ್ಟು ಸಾವಿನ ಸಂಖ್ಯೆ 50,000 ಮೀರಿದೆ.

- Advertisement -

ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಐವತ್ತು ಸಾವಿರಕ್ಕಿಂತಲೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ಫೆ.6 ರಂದು ನಡೆದ ಭೂಕಂಪದಲ್ಲಿ 5,20,000 ಅಪಾರ್ಟ್‌ಮೆಂಟ್‌ಗಳು ಸೇರಿದಂತೆ 1,60,000 ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಅಪಾರ ಸಾವು ನೋವುಗಳು ಸಂಭವಿಸಿತ್ತು.

ನಿರಾಶ್ರಿತರಿಗೆ ಹೊಸ ಮನೆಗಳನ್ನು ನಿರ್ಮಿಸಲು ಟೆಂಡರ್‌‌ಗಳು ಮತ್ತು ಒಪ್ಪಂದಗಳು ಪೂರ್ಣಗೊಂಡಿವೆ. ಈ ಪ್ರಕ್ರಿಯೆಯು ಅತ್ಯಂತ ವೇಗವಾಗಿ ಸಾಗುತ್ತಿದ್ದು, ಹಲವಾರು ನಿರಾಶ್ರಿತರಿಗೆ ಟೆಂಟ್‌‌ಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version