ತುಮಕೂರು: ರಾಜ್ಯ ರಾಜಧಾನಿಯಿಂದ ಹಿಡಿದು ವಿವಿಧೆಡೆ ಚಿರತೆ ಪ್ರತ್ಯಕ್ಷವಾಗುತ್ತಿರುವುದು ಜನತೆಗೆ ಆತಂಕದ ವಿಷಯವಾಗಿದೆ. ಇದೀಗ ತುಮಕೂರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದಲ್ಲದೆ, ಬಾಲಕಿಯ ಮೇಲೆ ದಾಳಿ ಮಾಡಿ ಹೊತ್ತೊಯ್ಯಲು ಯತ್ನಿಸಿದೆ. ಆದರೆ ತಂದೆ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
7 ವರ್ಷದ ಬಾಲಕಿ ಲೇಖನಾ ಮನೆ ಮುಂದೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಆಕೆಯನ್ನು ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಯನ್ನು ಬೆದರಿಸಿ ಚಿರತೆಯನ್ನು ಓಡಿಸಿದ್ದಾರೆ. ಚಿರತೆ ಬಾಲಕಿಯನ್ನು ಬಿಟ್ಟು ಓಡಿ ಹೋಗಿದೆ.
ಮಗುವನ್ನು ಬಂದಿದ್ದ ಶಿರತೆಯ ದಾಳಿಗೆ ಏಳು ವರ್ಷದ ಮಗು ಲೇಖನಾಗೆ ಕೈಮತ್ತು ಮೈಯಿಗೆ ಚಿರತೆ ಪರಚಿರುಹುವಂತಹ ಗಾಯಗಳಾಗಿದ್ದು, ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಬಾಲಕಿ ಪಾರಾಗಿದ್ದಾಳೆ.